ಕಲಬುರಗಿ : JDSನ ಅಧಿನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಲಬುರಗಿಯಲ್ಲಿ ಮಾತನಾಡಿದ್ದು, ಸದ್ಯದಲ್ಲೇ ನಡೆಯಲಿರುವ ಪಂಚ ರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಬಣ್ಣಿಸಿದ್ದಾರೆ.
ಇನ್ನು, ರಾಷ್ಟ್ರ ರಾಜಕಾರಣದ ಚಿತ್ರಣವನ್ನು ತೆರೆದಿಟ್ಟಿರುವ ಮಾಜಿ ಪ್ರಧಾನಿ ದೇವೇಗೌಡ ದೇಶದಲ್ಲಿ ತೃತೀಯ ರಂಗ ಸ್ಥಾಪನೆ ಮಾಡುವುದು ಸದ್ಯಕ್ಕೆ ಕಷ್ಟವಿದೆ. ಪಂಚ ರಾಜ್ಯ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ತಮ್ಮ JDS ಪಕ್ಷವನ್ನು ಸರ್ವನಾಶ ಮಾಡಲು ಬಿಜೆಪಿ, ಕಾಂಗ್ರೆಸ್ ಹೊರಟಿವೆ. ಆದರೆ ಸದ್ಯದ ಕಾಂಗ್ರೆಸ್ ಸ್ಥಿತಿ ಶೋಚನೀಯವಾಗಿದೆ. ಬಿಜೆಪಿಯನ್ನು ಈಗ ಬಿಜೆಪಿ ಅಂತ ಕರೆಯಬೇಕೋ, ಇಲ್ಲವೇ ಮೋದಿ ಪಾರ್ಟಿ ಅಂತ ಕರೆಯಬೇಕೋ ಗೊತ್ತಿಲ್ಲ. ಬಿಜೆಪಿ ಈಗ ಒನ್ ಮ್ಯಾನ್ ಪಾರ್ಟಿಯಾಗಿದೆ. ಅದರ ಮುಂದಿನ ಪರಿಣಾಮ ಏನಾಗುತ್ತೋ ಅದೂ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಮಾಧ್ಮಮದೊಂದಿಗೆ ಮಾತನಾಡುತ್ತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ.