ಬೆಂಗಳೂರು: 4ಗಂಟೆಗಳಿಗೂ ಹೆಚ್ಚು ಕಾಲ ಸಭೆ ಸೇರಿದ ಸಚಿವರು ಹಾಗೂ ತಜ್ಷರು ಕಡೆಗೂ ಕೊರೋನಾ 3ನೇ ಅಲೆ ಕುರಿತಂತೆ ಹಲವು ಬಿಗಿ ನಿಯಮಗಳನ್ನು ಘೋಷಣೆ ಮಾಡಿದ್ದಾರೆ. ಮೊದಲಿಗೆ ಸುಧಾಕರ್ ಏನು ಹೇಳಿದರು ಅಂದರೆ.. ಒಮೈಕ್ರಾನ್ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ, ಮಹಾರಾಷ್ಟ್ರ ತಮಿಳುನಾಡು ತೆಲಂಗಾಣ ಕ್ರಮಗಳನ್ನು ಕೈಗೊಂಡಿದೆ ಅವುಗಳನ್ನು ಅವಲೋಕಿಸಲಾಗಿದೆ. ಎಲ್ಲರ ಸಲಹೆ ಮೇಲೆ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಇಂದು ಕೊರೋನ ಸಂಕ್ರಮಿತರು ಮೂರು ಸಾವಿರ ಗಡಿ ದಾಟಿದೆ. ವಿದೇಶಿ ಪ್ರಯಾಣಿಕರಿಗೆ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಹೈರಿಸ್ಕ್ ದೇಶದ ಪ್ರಯಾಣಿಕರು ಪಾಸಿಟಿವ್ ಬಂದ್ರೆ ಅವರಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ.
ಬೆಡ್, ಐಸಿಯೂ, ಔಷಧಿ ಸರಬರಾಜು ಖರೀದಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಮೊದಕೆರಡು ಅಲೆಗಳಲ್ಲಿ ಪಾಸಿಟಿವ್ ಕೇಸ್ ಬೆಂಗಳೂರಿನಲ್ಲಿದ್ದವು. ಈಗ ಶೇ 85% 90% ಪಾಸಿಟಿವ್ ಕೇಸ್ ಇಲ್ಲಿ ಇವೆ. ಎಂಟು ವಲಯ ಸಿದ್ಧ ಮಾಡಲಾಗಿದೆ. ಸಮಗ್ರವಾಗಿ ಶಿಸ್ತಿನಿಂದ ಸಿದ್ಧ ಮಾಡಲಾಗಿದೆ. ಎಂಟು ವಲಯಗಳಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಸಹ ಮಾಡಲಾಗಿದೆ. ಹೊರ ರಾಜ್ಯ ಮತ್ತು ದೇಶಗಳಿಂದ ಬರುವವರು ಕಡ್ಡಾಯವಾಗಿ ಆರ್ ಪಿಸಿ ಆರ್ ನೆಗಟಿವ್ ರಿರ್ಪೋರ್ ತರಬೇಕು.
ಸುಧಾಕರ್ ಹೇಳಿಕೆ ನಂತರ ಆರ್.ಅಶೋಕ್ ಸಹ ಹೇಳಿಕೆ ನೀಡಿದರು. ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಒಮೈಕ್ರಾನ್ ಕೋವಿಡ್ ಗಿಂತ 5 ಪಟ್ಟು ಹೆಚ್ಚಾಗ್ತಿದೆ. ಇಂದು ಕೂಡ ಕೇಸ್ ಗಳ ಸಂಖ್ಯೆ ಹೆಚ್ಚಾಗ್ತಿದೆ. ಕಳೆದ ಮೂರು ದಿನದಿಂದ ಕೊರೋನಾ ಕೇಸ್ ಹೆಚ್ಚಾಗ್ತಿದೆ. ಇನ್ನು ಐದಾರು ದಿನಗಳಲ್ಲಿ ಹತ್ತು ಸಾವಿರ ಆಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ತುಂಬ ಯೋಚನೆ ಮಾಡಿ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮಲ್ಲಿಯೂ ಪಾಸಿಟಿವ್ ರೇಟ್ 3% ತಲುಪಿದೆ. ಬೆಂಗಳೂರಿನಲ್ಲಿ ಮಾತ್ರ ಮುಂದಿನ ಎರಡು ವಾರ 10 ಮತ್ತು 12 ತರಗತಿ ಆಫ್ ಲೈನ್.. ಉಳಿದ ತರಗತಿ ಆನ್ಲೈನ್ ಕ್ಲಾಸ್ ನಡೆಯಲಿವೆ.7 ತಾರೀಖಿನಿಂದ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗುವುದು. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗಿನ 5 ಗಂಟೆವರೆಗೆ ಈ ವೀಕೆಂಡ್ ಕರ್ಫ್ಯೂ ಇರಲಿದೆ. ಇದೆಲ್ಲ ಬೆಂಗಳೂರಿಗೆ ಮಾತ್ರ ಅನ್ವಯವಾಗಲಿದೆ.
ಓಂಪ್ರಕಾಶ್ ನಾಯಕ್, ಪವರ್ ಟಿವಿ