Saturday, April 19, 2025

ಶ್ರೀಕೃಷ್ಣ ಹೇಳಿದ ಮುಂದೆ ನಮ್ಮದೇ ಸರ್ಕಾರ : ಅಖಿಲೇಶ್​ ಯಾದವ್​

ಪ್ರತಿದಿನವೂ ಭಗವಂತ ಶ್ರೀಕೃಷ್ಣ, ನನ್ನ ಕನಸಲ್ಲಿ ಬರುತ್ತಿದ್ದಾನೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್​ ಹೇಳಿದ್ದಾರೆ.

ಬಹ್ರೈಚ್​​ನ ಬಿಜೆಪಿ ಶಾಸಕಿ ಮಾಧುರಿ ವರ್ಮಾ ಸೋಮವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಅಖಿಲೇಶ್​ ಯಾದವ್​, ಮುಂದಿನ ಚುನಾವಣೆಯಲ್ಲಿ ನನ್ನ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಖಂಡಿತ ರಾಮರಾಜ್ಯ ಸ್ಥಾಪಿಸುತ್ತೇವೆ.

ಈಗಂತೂ ಪ್ರತಿದಿನ ಭಗವಂತ ಶ್ರೀಕೃಷ್ಣ ನನ್ನ ಕನಸಲ್ಲಿ ಬರುತ್ತಿದ್ದಾನೆ, ಹೀಗೆ ಬಂದು, ಮುಂದಿನ ಚುನಾವಣೆಯಲ್ಲಿ ನಿಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ನೀವು ರಾಮರಾಜ್ಯ ಸ್ಥಾಪನೆ ಮಾಡುತ್ತೀರಿ ಎಂದು ಹೇಳುತ್ತಿದ್ದಾನೆ ಎಂದಿದ್ದಾರೆ. ರಾಮರಾಜ್ಯ ಸ್ಥಾಪನೆಗೆ ಸಮಾಜವಾದ ಮಾರ್ಗದಲ್ಲೇ ಹೋಗಬೇಕು. ಯಾವಾಗ ಸಮಾಜವಾದ ಸ್ಥಾಪನೆಯಾಗುತ್ತದೆಯೋ, ಆಗ ರಾಮರಾಜ್ಯವೂ ಸ್ಥಾಪಿತಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES