Friday, November 22, 2024

ಮೈಸೂರಿನಲ್ಲಿ ವಾಮಾಚಾರಕ್ಕೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಬಲಿ

ಮೈಸೂರು : ಸ್ನೇಹಿತರೇ ತಮ್ಮ ಗೆಳೆಯನೊಬ್ಬನಿಗೆ ಧನುರ್ ಅಮಾವಾಸ್ಯೆ ದಿನದಂದು ವಾಮಾಚಾರಕ್ಕೆಂದು ಬಲಿ ಕೊಟ್ಟಿರುವ ಆಘಾತಕಾರಿ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಎಸ್.ಎಸ್.ಎಲ್.ಸಿ.ಓದುತ್ತಿದ್ದ ಮಹೇಶ್@ಮನು(16) ಬಲಿಯಾದ ಬಾಲಕ. ಧನುರ್ ಮಾಸದ ಅಮವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತವೆ ಎಂಬ ನಂಬಿಕೆ ಇವರಲ್ಲಿ ಗಾಢವಾಗಿತ್ತು. ಇದೇ ದೃಷ್ಟಿಯಿಂದ ಭಾನುವಾರ ಮಹೇಶ್​ನನ್ನು ಪುಸಲಾಯಿಸಿ ಈ ಮೂವರು ಕಿರಾತಕರು ಕೆರೆ ಬಳಿಗೆ ಕರೆತಂದಿದ್ದಾರೆ. ಸ್ನೇಹಿತರ ಉದ್ದೇಶ ಅರಿಯದ ಅಮಾಯಕ ಮಹೇಶ್ ಜೊತೆಹೆ ಬಂದಿದ್ದಾನೆ. ಸ್ಧಳದಲ್ಲಿ ಗೊಂಬೆಯೊಂದನ್ನು ತಯಾರಿಸಿ ಅದರ ಮೇಲೆ ಮಹೇಶ್ ಹೆಸರು ಬರೆದು, ನಂತರ ಪೂಜೆ ಮಾಡಿದ್ದಾರೆ.

ಪೂಜೆ ನಂತರ ಮಹೇಶ್​ನನ್ನು ಆರೋಪಿಗಳು ಕೆರೆಗೆ ತಳ್ಳಿದ್ದಾರೆ. ಕೃತ್ಯವೆಸಗಿದ ನಂತರ ಆರೋಪಿಗಳು ಸ್ಧಳದಿಂದ ಕಾಲ್ಕಿತ್ತಿದ್ದಾರೆ. ಮಹೇಶ್​ ಕೆರೆಗೆ ಬಿದ್ದಿದ್ದಾನೆ ಎಂದು ಸ್ನೇಹಿತನೊಬ್ಬ ಗ್ರಾಮದ ಹಿರಿಯರಿಗೆ ಮಾಹಿತಿ ತಿಳಿಸಿದ್ದಾನೆ. ಗ್ರಾಮದ ಜನ ಕೆರೆಯಲ್ಲಿ ಶೋಧನೆ ಮಾಡಿದಾಗ ಮಹೇಶ್ ಮೃತದೇಹ ಪತ್ತೆಯಾಗಿದೆ. ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಸಿಕ್ಕಿದೆ. ಗೊಂಬೆ,ಕೋಳಿ,ಮಡಿಕೆ ಸೇರಿದಂತೆ ಇನ್ನಿತರ ಪದಾರ್ಥಗಳು ಪತ್ತೆಯಾಗಿತ್ತು, ಕೌಲಂದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ, ನಡೆಸಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES