ಪ್ರತಿಯೊಬ್ಬರ ಮನೆಯೂ ಸುಂದರವಾಗಿ ಕಾಣಲು ಮನೆಯ ಮುಂದೆ ಅಲಂಕಾರಿಕವಾದ ಗಿಡಗಳನ್ನು ಬೆಳೆಸುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ಜನರು ತಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡುವುದರಿಂದ ಹಣವು ಹೆಚ್ಚಾಗುತ್ತದೆ ಎಂದು ನಂಬುತ್ತಾರೆ ವಾಸ್ತುವಿನ ಪ್ರಕಾರ ಅದನ್ನು ಸರಿಯಾಗಿ ಪರಿಗಣಿಸಲಾಗುತ್ತದೆ. ಆದರೆ ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ, ಇಲ್ಲವಾದರೆ ಈ ನಿರ್ದಿಷ್ಟ ಸಸ್ಯವು ಅದರ ಗುಣಮಟ್ಟದ ವಿರುದ್ಧ ಪರಿಣಾಮವನ್ನು ಬೀರಬಹುದು.
ವಾಸ್ತು ಪ್ರಕಾರ, ಮನಿ ಪ್ಲಾಂಟ್ನ್ನು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಹಣವನ್ನು ಹೆಚ್ಚಿಸುವ ಬದಲು ಹಣವು ಬಿಗಿಯಾಗಿ ಉಳಿಯುತ್ತದೆ. ಅದಕ್ಕಾಗಿಯೇ ಇಂದು ನಾವು ನಿಮಗೆ ಮನಿ ಪ್ಲಾಂಟ್ ಯಾವ ದಿಕ್ಕಿನಲ್ಲಿದ್ದರೇ ಒಳ್ಳೆದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ವರ್ಷವಿಡೀ ಹಸಿರಾಗಿಯೇ ಇರುವ ಈ ವಿಶೇಷ ಗಿಡ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಮನಿ ಪ್ಲಾಂಟ್ ಮನಿ ಪ್ಲಾಂಟ್ನ ಗಿಡವೂ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಮತ್ತು ಅದೇ ಸಮಯದಲ್ಲಿ ಅದು ಮನೆಯಲ್ಲಿದ್ದರೆ ಹಣದ ಕೊರತೆಯಿರುವುದಿಲ್ಲ. ಅಲ್ಲದೇ ಮನಿ ಪ್ಲಾಂಟ್ ನಿಮಗೆ ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಸಹ ನೀಡುತ್ತದೆ.
ಮನೆಯ ಯಾವ ದಿಕ್ಕು ಸೂಕ್ತ :
ವಾಸ್ತುವಿನ ಪ್ರಕಾರ, ನೀವು ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ನ್ನು ನೆಡಬೇಕು. ಈ ದಿಕ್ಕಿನಲ್ಲಿ ಅನ್ವಯಿಸುವುದರಿಂದ ಸಂಪತ್ತು ಮತ್ತು ಸಂತೋಷ ಮತ್ತು ಸಮೃದ್ಧಿಯ ಪ್ರಾಪ್ತಿಯಲ್ಲಿ ಅಭಿವೃದ್ಧಿ ಇರುತ್ತದೆ, ಧನಾತ್ಮಕ ಶಕ್ತಿಯ ಸಂವಹನವೂ ಮನೆಯಲ್ಲಿ ಉಳಿಯುತ್ತದೆ. ಆದರೆ, ಈಶಾನ್ಯ ಮತ್ತು ಪೂರ್ವ ಪಶ್ಚಿಮದ ದಿಕ್ಕು ತಪ್ಪು, ಹಾಗಾಗಿ ಈ ದಿಕ್ಕಿನಲ್ಲಿ ಎಂದೂ ಮನಿ ಪ್ಲಾಂಟ್ ಅನ್ನು ನೆಡಬಾರದು.
ಇದರಿಂದ ಮನೆಗೆ ಋಣತ್ಮಾಕ ಶಕ್ತಿ ಉಂಟಾಗುತ್ತದೆ. ಅಲ್ಲದೇ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಪತಿ-ಪತ್ನಿಯರ ನಡುವಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೂ ಮನಿ ಪ್ಲಾಂಟ್ ಇಟ್ಟ ಜಾಗವು ಯಾವಗಲೂ ಶುಭ್ರವಾಗಿರಬೇಕು.
ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಉಪಯೋಗಗಳು :
- ಮನೆಯಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ.
- ಈ ಗಿಡವನ್ನು ಬೆಳೆಸುವುದರಿಂದ ಸಮೃದ್ಧಿ ಉಳಿಯುತ್ತದೆ.
- ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಮನೆಯ ಸದಸ್ಯರ ನಡುವಿನ ಸಂಬಂಧವು ಚೆನ್ನಾಗಿರುತ್ತದೆ.
- ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನ ಉಳಿಯುತ್ತದೆ.
- ಮನೆಯಲ್ಲಿ ಇರುವ ವಾಸ್ತು ದೋಷಗಳೂ ನಿವಾರಣೆಯಾಗುತ್ತದೆ.
- ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.
ಕುಮುದ ಗೌಡ, ಪವರ್ ಟಿವಿ