Saturday, September 21, 2024

ಇಂದಿನಿಂದ 2ನೇ ಟೆಸ್ಟ್; ಕೆ.ಎಲ್.ರಾಹುಲ್ ಕ್ಯಾಪ್ಟನ್

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಜೊಹಾನ್ಸ್​ಬರ್ಗ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕ 2ನೇ ಟೆಸ್ಟ್ ಇಂದಿನಿಂದ ಆಡುತ್ತಿವೆ. ಭಾರತದ ತಂಡಕ್ಕೆ ಈ ಟೆಸ್ಟ್​ ಪಂದ್ಯವನ್ನು ಕನ್ನಡದ ಕುವರ ಕೆ.ಎಲ್.ರಾಹುಲ್ ಕಪ್ತಾನನಾಗಿ ಮುನ್ನಡೆಸುತ್ತಿದ್ದಾರೆ. ಪೂರ್ವ ಕಪ್ತಾನ ಕಿಂಗ್ ಕೊಹ್ಲಿ ಕೊರೋನದಿಂದಾಗಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ ಆದ ಮೊದಲ ಪಂದ್ಯದಲ್ಲೇ ರಾಹುಲ್ ಟಾಸ್ ಗೆದ್ದು ಬೀಗಿದ್ದಾರೆ. ೠ

ಸದ್ಯ ಬ್ಯಾಟಿಂಗ್ ಆಯ್ದುಕೊಂಡಿರುವ ಟೀಮ್ ಇಂಡಿಯ 20 ಓವರ್​ಗಳಲ್ಲಿ 39 ರನ್​ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಕೆ.ಎಲ್.ರಾಹುಲ್ 10 ರನ್ ಗಳಿಸಿದ್ದರೆ, ಪೂಜಾರಾ 2ರನ್ ಗಳಿಸಿ ಆಡುತ್ತಿದ್ದಾರೆ. 34 ರನ್ ಗಳಿಸಿದ್ದ ಮಯಾಂಕ್ ಅಗರ್​ವಾಲ್ ಡ್ರಿಂಕ್ಸ್ ವಿರಾಮದ ನಂತರದ ಮೊದಲ ಬೌಲ್​ನಲ್ಲೇ ವಿಕೆಟ್ ಒಪ್ಪಿಸಿದರು.  ಇತ್ತೀಚಿನ ವರದಿಯ ಪ್ರಕಾರ ಭಾರತ 50 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಆಡುತ್ತಿದೆ.

RELATED ARTICLES

Related Articles

TRENDING ARTICLES