ಚಿಕ್ಕಮಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದಂತೆ ರಾಜ್ಯದ ಜನರಿಗೆ ಮತ್ತೆ ಲಾಕ್ ಡೌನ್ ಬಿಸಿ ತಟ್ಟಲಿದೆಯಾ..? ಎಂಬ ಪ್ರಶ್ನೆ ಎದ್ದಿರುವ ಸಮಯದಲ್ಲೇ ಗೃಹ ಸಚಿವರು ಲಾಕ್ ಡೌನ್ ಸುಳಿವು ನೀಡಿದ್ದಾರೆ.
ಹೌದು, ಕೋವಿಡ್ ಟಫ್ ರೂಲ್ಸ್ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚಿಕ್ಕಮಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮತ್ತೇ ಕರ್ನಾಟಕ ಲಾಕ್ ಡೌನ್ ಬಗ್ಗೆ ಸುಳಿವು ನೀಡಿದ್ದಾರೆ. ಜನರು ಸಹಕಾರ ಕೊಡದಿದ್ದರೆ ಲಾಕ್ಡೌನ್ ಅನಿವಾರ್ಯವಾಗಿದೆ ಕೊರೊನಾ ಸಂಖ್ಯೆ ಹೆಚ್ಚಾದರೆ ಸರ್ಕಾರ ಕಠಿಣ ರೂಲ್ಸ್ ಜಾರಿ ಮಾಡುತ್ತದೆ. ಹಾಗೂ ಲಾಕ್ಡೌನ್ ಮಾಡುವುದು ಸರ್ಕಾರಕ್ಕೆ ಅನಿವಾರ್ಯತೆಯೂ ಕೂಡ ಆಗಬಹುದು ಎಂದು ಹೇಳಿದ್ದಾರೆ.
ಜನರ ಜೀವ ಉಳಿಸುವುದು ಸರ್ಕಾರ ಸದಾ ಬದ್ಧವಾಗಿರುತ್ತದೆ,ಹೀಗಾಗಿ ಜನರೂ ಸರ್ಕಾರವು ಜಾರಿಗೆ ತರುವ ನಿಯಮಗಳನ್ನ ಪಾಲಿಸೋ ಮೂಲಕ ಸರ್ಕಾರಕ್ಕೆ ಸಹಕಾರಿ ನೀಡಬೇಕು ಎಂದು ಹೇಳುವ ಮೂಲಕ ಜನತೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮನವಿಕೊಂಡರು.