Friday, September 20, 2024

ಜನರ ರಕ್ತ ಹೀರುವವರು ಕಾಂಗ್ರೆಸ್ಸಿಗರು : ಸಚಿವ ಎಸ್​.ಟಿ ಸೋಮಶೇಖರ್

ಚಾಮರಾಜನಗರ: ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬೊಮ್ಮಾಯಿ ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಉತ್ತಮ ಆಡಳಿತವನ್ನು ಕೊಟ್ಟಿದ್ದಾರೆ. ಆದರೆ, ವಿರೋಧ ಪಕ್ಷದವರಾದ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಏನಾದರೂ ಹೇಳುತ್ತಿರುವುದು ಚಟವಾಗಿದೆ ಎಂದು ಸಚಿವ ಎಸ್​.ಟಿ. ಸೋಮಶೇಖರ್ ಅವರು ಸೋಮವಾರ ಹೇಳಿದರು.

ಬಿಜೆಪಿ ನಾಯಕರು ಜನರ ರಕ್ತ ಹೀರುವವರು ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಪಕ್ಷದ ನಾಯಕರುಗಳಿಗೆ ಏನಾದರೂ ಹೇಳುವುದು, ಆಮೇಲೆ ಸುಮ್ಮನೆ ಕೂರುವುದು ಮಾಡುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.

ಇನ್ನು ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಿ ರಾಜಕೀಯ ಮಾಡುತ್ತಿದೆ. ಈಗಾಗಲೇ ಯೋಜನೆ ಅನುಷ್ಠಾನಕ್ಕಾಗಿ ಸಿಎಂ ಎಲ್ಲ ಕ್ರಮ ಕೈಗೊಂಡಿದ್ದಾರೆ. ತಮಿಳುನಾಡಿನ ಕ್ಯಾತೆಗೆ ಸೂಕ್ತ ಉತ್ತರವನ್ನು ಸಹ ಕೊಟ್ಟಿದ್ದಾರೆ. ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದಾಗ ಏನು ಮಾಡಿದರು? ಬಿಜೆಪಿ ಸರ್ಕಾರ ಏನು ಮಾಡಿದೆ ಸೇರಿದಂತೆ ಎಲ್ಲಾ ಸೂಕ್ಷ್ಮ ವಿಚಾರಗಳ ಸಂಬಂಧ ಶೀಘ್ರವೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸದ್ಯ ಕೊರೊನಾ ಕಟ್ಟೆಚ್ಚರ, ಲಾಕ್​​​ಡೌನ್ ಕುರಿತು ಪ್ರತಿಕ್ರಿಯಿಸಿ, ಸದ್ಯಕ್ಕೆ ಮಹಾರಾಷ್ಟ್ರ ಗಡಿ ಮುಚ್ಚುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ತಜ್ಞರ ಸಲಹೆ ಮೇರೆಗೆ ನಿಯಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೇ  40 ಪರ್ಸೆಂಟೇಜ್​ ಸರ್ಕಾರ ಅಂತಾರೆ ಆದರೆ ಅದಕ್ಕೆ ಯಾವುದೇ ದಾಖಲೆಗಳನ್ನು ಹಿಡಿದು ಮಾತನಾಡಬೇಕು. ಆದರೆ, ದಾಖಲೆಗಳು ಇಲ್ಲದೆ ಸುಮ್ಮನೇ ಹಾದಿ-ಬೀದಿಯಲ್ಲಿ ಮಾತನಾಡುವುದಲ್ಲ ಎಂದು ಸಚಿವ ಎಸ್. .ಟಿ.ಸೋಮಶೇಖರ್​ ಅವರು ಟಾಂಗ್​ ನೀಡಿದರು.

RELATED ARTICLES

Related Articles

TRENDING ARTICLES