ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುವ ಪಾದಯಾತ್ರೆಯಲ್ಲಿ ಬೇಕಿದ್ರೆ ಕುಮಾರಸ್ವಾಮಿ ಅವರು ಭಾಗವಹಿಸಲಿ ಎಂಬ ಡಿಕೆಶಿ ಹೇಳಿಕೆಗೆ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ. ಭಾಗವಹಿಸಿ ಏನು ಮಾಡಬೇಕು? ಏನಾದರೂ ಪ್ರಯೋಜನ ಇದೆಯಾ? ಭಾಗವಹಿಸಿದ್ರೆ ಮೇಕೆದಾಟು ಜಾರಿ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ನಾವು ಮಾಡಿದ ಪಾದಯಾತ್ರೆಗೂ, ಈ ಪಾದಯಾತ್ರೆಗೂ ವ್ಯತ್ಯಾಸವಿದೆ. ಸರ್ಕಾರದ ವಿರುದ್ದ ಮಾಡಿದ ಪಾದಯಾತ್ರೆಗಳಲ್ಲಿ ಗೋಲಿಬಾರ್ನಿಂದಾಗಿ ಹಲವು ರೈತರು ಸಾವನ್ನಪ್ಪಿದಾರೆ. ಕಾಂಗ್ರೆಸ್ ನವರು ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯ ಅವಶ್ಯಕತೆ ಇಲ್ಲ. ಟೆಕ್ನಿಕಲಿ ಒಂದು ಸಮಸ್ಯೆ ಇದೆ. ಕೆಲಸ ಮಾಡಲು ಯಾರ ಅನುಮತಿಯೂ ಬೇಕಾಗಿಲ್ಲ. ಮುಂದಿನ ಮೀಟಿಂಗ್ನಲ್ಲಿ ಕ್ಲಿಯರೆನ್ಸ್ ಸಿಗುತ್ತೆ ಅಂತಾ ಸಿಎಂ ಹೇಳಿದ್ದಾರೆ. ಈಗ ಪಾದಯಾತ್ರೆ ಮಾಡಿದ್ರೆ ಅನುಮತಿ ಸಿಗುತ್ತಾ? ಎಂದು ಹೆಚ್ಡಿಕೆ ತಿರುಗೇಟು ನೀಡಿದರು.