ಹೊಸದಿಲ್ಲಿ : ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ವಿವಾದಾತ್ಮಕ ಹೇಳಿಕೆಯೊಂದಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಮಾಧ್ಯಮಗಳ ಪಾತ್ರ ಕುರಿತು ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಅವರು ತಮಾಷೆಗೆ ಹೇಳಿದ ಮಾತನ್ನು ವಿಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
ಗ್ರಾಮಪಂಚಾಯಿತಿ ಸದಸ್ಯರು ಲಂಚ ಪಡೆಯುತ್ತಾರೆಂದು ಜನರು ದೂರು ನೀಡಲು ಬರುತ್ತಾರೆ, ಆಗ ನಾನು ಪಂಚಾಯಿತಿ ಸದಸ್ಯ 15 ಲಕ್ಷ ರೂ. ಲಂಚ ಪಡೆಯುವುದು ಸಾಮಾನ್ಯ. ಅದನ್ನು ಭ್ರಷ್ಟಾಚಾರ ಎನ್ನಲಾಗದು ಎಂದು ತಮಾಷೆ ಮಾಡಿ ಕಳುಹಿಸುತ್ತೇನೆಂಬ ಮಾತು ಇದೀಗ ವಿವಾದಾತ್ಮಕಕ್ಕೆ ಕಾರಣವಾಗಿದೆ.
ಅಲ್ಲದೇ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸದಸ್ಯ 15 ಲಕ್ಷ ರೂ.ಗಿಂತ ಅಧಿಕ ಹಣ ಪಡೆದಾಗ ಮಾತ್ರ ಅದು ಭ್ರಷ್ಟಾಚಾರವಾಗುತ್ತದೆ. ಆಗ ಮಾತ್ರ ದೂರು ನೀಡಲು ಬನ್ನಿ ಎಂದು ತಿಳಿಸಿದರು.
ಆದರೆ ಆತ ಚುನಾವಣೆಯಲ್ಲಿ ಗೆಲ್ಲಲು 7 ಲಕ್ಷ ರೂ. ಖರ್ಚು ಮಾಡುತ್ತಾನೆ. ಗೆದ್ದ ನಂತರ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಲಕ್ಷಾಂತರ ಹಣ ಖರ್ಚು ಮಾಡಬೇಕಾಗುತ್ತದೆ. ಹಣದುಬ್ಬರ ಕಾರಣದಿಂದ ಇನ್ನೊಂದು ಲಕ್ಷ ರೂ. ಹೆಚ್ಚಿರುತ್ತದೆ ಎಂದು ಹೇಳಿರುವುದು ಈಗ ವೈರಲ್ ಆಗಿದೆ.