ಗೋಹತ್ಯೆ ನಿಷೇಧವನ್ನು ವಿರೋಧಿಸುವ ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಗೋವು ನಮಗೆ ತಾಯಿ ಇದ್ದಂತೆ ಹಾಗೂ ಅದು ನಮಗೆ ಪವಿತ್ರ ಎಂದು ಹೇಳಿದ್ದಾರೆ.
ಗೋವು ಹಾಗೂ ಎಮ್ಮೆಗಳ ಬಗ್ಗೆ ಅಪಹಾಸ್ಯ ಮಾಡುವವರಿಗೆ ಅವುಗಳನ್ನ ನಂಬಿ ದೇಶದ ಕೋಟ್ಯಂತರ ಜನರು ಜೀವನ ಸಾಗಿಸುತ್ತಿದ್ದಾರೆ ಎಂಬ ಸಂಗತಿ ಗೊತ್ತಿಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. ಸ್ವಕ್ಷೇತ್ರ ವಾರಾಣಸಿಯಲ್ಲಿ ಗುರುವಾರ 2,095 ಕೋಟಿ ರೂಪಾಯಿ ವೆಚ್ಚದ 27 ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗೋವು ನಮಗೆ ತಾಯಿ, ಪವಿತ್ರ ಎಂದು ಹೇಳಿದರೆ ಕೆಲವರಿಗೆ ಅಪರಾಧವಾಗಿ ಕಾಣುತ್ತದೆ. ಅವರಿಗೆ ಕೋಟ್ಯಂತರ ಜನರ ಜೀವನ ಗೋವುಗಳ ಮೇಲೆ ಅವಲಂಬನೆಯಾಗಿರುವ ಅರಿವಿಲ್ಲ ಎಂದು ಚಾಟಿ ಬೀಸಿದರು.