Saturday, December 28, 2024

ಹಾಕಿ ಸೆಮೀಸ್​ನಲ್ಲಿ ಭಾರತಕ್ಕೆ ಮತ್ತೆ ಜಪಾನ್ ಎದುರಾಳಿ

ಢಾಕಾ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಭಾರತ, ಜಪಾನ್‌ ವಿರುದ್ಧ ಸೆಣಸಾಡಲಿದೆ. ರೌಂಡ್‌ ರಾಬಿನ್‌ ಮಾದರಿಯ ಕೊನೆ ಪಂದ್ಯದಲ್ಲಿ ಭಾನುವಾರ ಜಪಾನ್‌ ವಿರುದ್ಧ 6-0 ಗೋಲುಗಳಿಂದ ಗೆದ್ದಿದ್ದ ಭಾರತ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಟೂರ್ನಿಯಲ್ಲಿ ಅಜೇಯವಾಗಿಯೇ ಸೆಮೀಸ್‌ ತಲುಪಿರುವ ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ತಂಡ ಈ ಪಂದ್ಯದಲ್ಲೂ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, 5ನೇ ಬಾರಿ ಫೈನಲ್‌ ಪ್ರವೇಶಿಸುವ ಕಾತರದಲ್ಲಿದೆ.

ಇನ್ನು, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಗ್ರೂಪ್ ಹಂತದಲ್ಲಿ 4 ಪಂದ್ಯಗಳನ್ನಾಡಿ ಕೇವಲ 1ರಲ್ಲಿ ಗೆದ್ದು ಸೆಮೀಸ್‌ ತಲುಪಿದ್ದ ಜಪಾನ್‌, ಭಾರತ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಈ ಪಂದ್ಯವು ಢಾಕಾದ ಮೌಲಾನಾ ಭಷಾನಿ ಹಾಕಿ ಸ್ಟೇಡಿಯಂನಲ್ಲಿ ಇಂದು ಮಂಗಳವಾರ ನಡೆಯಲಿದೆ.

RELATED ARTICLES

Related Articles

TRENDING ARTICLES