ನವದೆಹಲಿ: ಏನು ಮಾಡಬಾರದು ಎಂಬುದನ್ನು ಪ್ರಧಾನಿ ಮೋದಿಯಿಂದ ನಾನು ಕಲಿತಿದ್ದೇನೆ ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿ, “ಮೋದಿಯವರ ಕೈಯಲ್ಲಿ ಅವಕಾಶವಿತ್ತು. ಆದರೆ ಅವರು ದೇಶದ ಮಿಡಿತವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದರು” ಎಂದಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಚುನಾವಣೆಯಲ್ಲಿ ಗೆಲ್ಲುವುದು ಪ್ರಧಾನಿ ಮೋದಿಗೆ ಕಷ್ಟದ ಕೆಲಸವಾಗಲಿದೆ. ಮೋದಿ ಚುನಾಯಿತರಾದಾಗ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ನಿಗ್ರಹದ ಭರವಸೆ ನೀಡಿದ್ದರು. ಭರವಸೆ ಈಡೇರಿಸದ ಕಾರಣ ಇಂದು ಮತದಾರರು ವಿಶ್ವಾಸ ಕಳೆದುಕೊಂಡಿದ್ದಾರೆ. ಇದರ ಪರಿಣಾಮವೇ ಬಿಜೆಪಿ ಸೋಲು” ಅಂತ ರಾಹುಲ್ಗಾಂಧಿ ಹೇಳಿದ್ದಾರೆ.
“ನನ್ನ ಮಟ್ಟಿಗೆ 2014ರ ಚುನಾವಣೆ ಬೆಸ್ಟ್. ಅದರಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ನಮ್ರತೆ ಬಹಳ ಮುಖ್ಯ ಎಂಬುದನ್ನು ಕಲಿತೆ. 2014ರ ನಂತರದ ಪಯಣ ಸುಂದರವಾಗಿತ್ತು. ಒಂದಷ್ಟು ಹೊಡೆತಗಳು ಸಿಕ್ಕವು. ಆದರೆ ಅವು ಕೆಟ್ಟದಲ್ಲ, ಒಳ್ಳೆಯ ವಿಚಾರ” ಎಂದರು.
2014ರಿಂದ ಕಾಂಗ್ರೆಸ್ ಹಾಗೂ ರಾಹುಲ್ಗಾಂಧಿಗೆ ಸಿಕ್ಕ ಬೆಸ್ಟ್ ಫಲಿತಾಂಶ ಇದಾಗಿದೆ. ಕಾಂಗ್ರೆಸ್ ರಾಜಸ್ಥಾನ, ಛತ್ತೀಸ್ಗಡ್ನಲ್ಲಿ ಗೆಲುವು ಸಾಧಿಸಿ, ಮಧ್ಯಪ್ರದೇಶದಲ್ಲಿ ಬಹುಮತ ಗಳಿಸುವಲ್ಲಿ ವಿಫಲವಾಗಿದೆ.