ಬೆಂಗಳೂರು: ಕೊರೋನಾದ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಹಾಗಂತ ದೇಶಾದ್ಯಂತ ಇನ್ನೂ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗಿಲ್ಲ. ಸತತ ಒಂದೂವರೆ ತಿಂಗಳಿಂದಲೂ ವಾಹನಗಳ ಇಂಧನ ದರ ಸ್ಥಿರವಾಗಿಯೇ ಇದೆ.
ಇಂದು ಕೂಡ ಪೆಟ್ರೋಲ್-ಡೀಸೆಲ್ ದರ ಸ್ಥಿರವಾಗಿದೆ. ಕಳೆದ ತಿಂಗಳು ಅಂದರೆ ನವೆಂಬರ್ 4ರಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿತ್ತು..ಇತ್ತೀಚೆಗೆ ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ್ರಿಂದ ಅಲ್ಲಿ 103 ರೂ.ಇದ್ದ ದರ 95 ರೂ.ಗೆ ಇಳಿಕೆಯಾಗಿದೆ. ಆದರೆ ಡೀಸೆಲ್ ದರ ಸ್ಥಿರವಾಗಿದ್ದು, ಲೀಟರ್ಗೆ 86.67 ರೂಪಾಯಿ ನಿಗದಿಯಾಗಿದೆ. ಕೇಂದ್ರ ಸರ್ಕಾರ ಈ ಮುನ್ನ ಅಂತರರಾಷ್ಟ್ರೀಯ ದರದಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಾಗಿರುವುದರಿಂದ ಭಾರತದಲ್ಲೂ ಹೆಚ್ಚಿದೆ ಎಂದು ಹೇಳುತ್ತಲೇ ಬಂದಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಕಚ್ಚಾತೈಲದ ಬೆಲೆ ಪಾತಾಳಕ್ಕೆ ಕುಸಿದರೂ, ಭಾರತದಲ್ಲಿ ಮಾತ್ರ ತೈಲಬೆಲೆ ಕಡಿಮೆಯಾಗುವುದಿಲ್ಲ.