Monday, November 25, 2024

ನಿಮ್ಮ ಮುಖವನ್ನು ಮೊಡವೆಗಳಿಂದ ಮುಕ್ತಗೊಳಿಸಬೇಕೆ?

ಪಿಂಪಲ್ಸ್ ಕೇರ್ : ಮೊಡವೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಮೊಡವೆಗಳ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಇಂದಿನ ಯುವಜನತೆ ಆತಂಕಕ್ಕೆ ಒಳಗಾಗಿದ್ದಾರೆ. ವಾಸ್ತವವಾಗಿ ಪಿಂಪಲ್ಸ್ ಕೇರ್ ಟಿಪ್ಸ್‌ಗೆ ಏನೇನೋ ಮಾಡ್ತಾ ಇರುತ್ತಾರೆ. ಅಲ್ಲದೆ ಮೊಡವೆಗಳು ಹೆಚ್ಚಾಗಲು ಕಾರಣವೆಂದರೆ ನಮ್ಮ ತಪ್ಪು ಆಹಾರ ಪದ್ಧತಿ ಮತ್ತು ಜೀವನಶೈಲಿ, ಹೆಚ್ಚಿನ ಫಾಸ್ಟ್ ಫುಡ್ ಮತ್ತು ಎಣ್ಣೆಯುಕ್ತ ವಸ್ತುಗಳನ್ನು ತಿನ್ನುವುದು ಕೂಡ ಒಂದು.

ಅಷ್ಟೇ ಅಲ್ಲ, ಹೊಟ್ಟೆಯ ಸ್ವಚ್ಛತೆಯ ಕೊರತೆಯಿಂದ ಯಾರಿಗಾದರೂ ಫುಡ್ಸ್ ಫಾರ್ ಪಿಂಪಲ್ಸ್ ಸಮಸ್ಯೆ ಕಾಡಬಹುದು. ಮುಖದ ಮೇಲಿನ ಮೊಡವೆಗಳು ತುಂಬಾ ನೋವಿನಿಂದ ಕೂಡಿರುತ್ತವೆ. ಅಲ್ಲದೆ ಮುಖ ಕೆಲವೊಮ್ಮೆ ಊದಿಕೊಳ್ಳುತ್ತೆ. ನೀವು ಸಹ ಇದೇ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮತ್ತು ನಿಮ್ಮ ಮುಖವನ್ನು ಮೊಡವೆ ಮುಕ್ತ ಮತ್ತು ಹೊಳೆಯುವಂತೆ ಮಾಡಲು ಬಯಸಿದರೆ, ಮೊದಲು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳೋದ್ರಿಂದ ಮೊಡವೆಗಳು ಕಡಿಮೆ ಆಗೋದಕ್ಕೆ ಸಹಾಯವಾಗುತ್ತೆ. ಚರ್ಮವನ್ನು ಆರೋಗ್ಯವಾಗಿಡಲು ಮತ್ತು ಮೊಡವೆಗಳನ್ನು ಮುಕ್ತ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ.

  • ಜೇನುತುಪ್ಪ: ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಮೊಡವೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ಮೊಡವೆಗಳ ಮೇಲೆ ಹಚ್ಚುವುದರಿಂದ ಅಥವಾ ಆಹಾರದಲ್ಲಿ ಜೇನುತುಪ್ಪವನ್ನು ಸೇರಿಸುವುದರಿಂದ ಮೊಡವೆಗಳ ಸಮಸ್ಯೆಯನ್ನು ನಿವಾರಿಸಬಹುದು.
  • ಕೇಸರಿ : ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರು, ಕೇಸರಿ ಹಾಲನ್ನು ಸೇವಿಸಿ. ರಾತ್ರಿಯ ವೇಳೆ ಕೇಸರಿ ಹಾಲನ್ನು ಸೇವಿಸೋದ್ರಿಂದ ನಿಮ್ಮ ಆರೋಗ್ಯ ಹಾಗೂ ಹೊಳಪಿನ ತ್ವಚೆ ನೀಡುತ್ತದೆ. ಒಳಪಿನ ತ್ವಚೆಯಿಂದ ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್-ಸಿ ಮುಂತಾದ ಅಂಶಗಳಿದ್ದು, ಇದು ಚರ್ಮದ ಕಪ್ಪು ಕಲೆ ಮತ್ತು ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
  • ಗ್ರೀನ್ ಟೀ : ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮೊಡವೆಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಕಬ್ಬಿಣ ಮತ್ತು ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ ಗುಣವಿದ್ದು, ತ್ವಚೆಯನ್ನು ಆರೋಗ್ಯವಾಗಿಡಲು ನೆರವಾಗುತ್ತದೆ.
  • R.ರಮ್ಯ, ಪವರ್ ಟಿವಿ

RELATED ARTICLES

Related Articles

TRENDING ARTICLES