Sunday, November 3, 2024

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ವಿರುದ್ಧ ಪ್ರತಿಭಟನೆ

ಬೆಂಗಳೂರು : ನೂರಾರು ಕೋಟಿ ವಂಚನೆ ಮಾಡಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ವಿರುದ್ಧ ಅಲ್ಲಿನ ಠೇವಣಿದಾರರು ಪ್ರತಿಭಟನೆ ನಡೆಸಿದ್ದಾರೆ.

ನೂರಾರು ಠೇವಣಿದಾರರು ಹಾಗೂ ಷೇರುದಾರರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಷೇರುದಾರರ ಹಾಗೂ ಠೇವಣಿದಾರರ ಹಿತರಕ್ಷಣಾ ವೇದಿಕೆಯಲ್ಲಿ ಸೇರಿ ಘೋಷಣೆ ಕೂಗುವುದರ ಮೂಲಕ ಪ್ರತಿಭಟನೆ ನಡೆಸಿದರು.

ನಮ್ಮ ಹಣ ನಮಗೆ ವಾಪಸ್ ನೀಡಿ ಎಂದು ಮಾಧ್ಯಮದ ಮೂಲಕ ಒತ್ತಾಯಿಸಿದ ಪ್ರತಿಭಟನಕಾರರು, ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ, ವಂಚಕರಿಗೆ ಗಲ್ಲಿಗೇರಿಸಿ ಎಂದು ಆಕ್ರೋಷ ವ್ಯಕ್ತಪಡಿಸಿದರು. ರಾಜ್ಯಸರ್ಕಾರ ನಮ್ಮನ್ನು ಗಮನಿಸುತ್ತಲೇ ಇಲ್ಲ, ಕೇಂದ್ರಸರ್ಕಾರ ಮಧ್ಯ ಪ್ರವೇಶಿಸಬೇಕು, ದುಡ್ಡು ತಿಂದು ನೆಮ್ಮದಿಯಿಂದ ನಿದ್ರಿಸುತ್ತಿರುವ ವಂಚಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿರಿಯ ನಾಯಕರು ಕಷ್ಟಕಾಲದಲ್ಲಿ ಬೇಕಾಗುತ್ತೆ ಎಂದು ಬ್ಯಾಂಕಿನಲ್ಲಿ ಹಣವನ್ನು ಇರಿಸಿದ್ದರು. ಆದರೆ ಬ್ಯಾಂಕಿನ ಕಳ್ಳರು ಅದನ್ನು ತಿಂದು ಮಜಾಮಾಡುತ್ತಿದ್ದಾರೆ. ಈಗಾಗಲೇ ವರ್ಷದಿಂದ ಹಣ ಕಳೆದುಕೊಂಡ ಮೂವರು ಸಾವನ್ನಪ್ಪಿದ್ದಾರೆ. ಕಳ್ಳರನ್ನು ದೊಡ್ಡವರು ರಕ್ಷಣೆ ಮಾಡುತ್ತಿದ್ದಾರೆ. ಕೆಲವರಿಗೆ ಕೇವಲ 5 ಲಕ್ಷ ಕೊಟ್ಟು ಕಳುಹಿಸುತ್ತಿದ್ದಾರೆ. ಆದರೆ ಇದು ನಮಗೆ ಸಾಲುವುದಿಲ್ಲ. ಪೂರ್ಣ ಹಣ ಕೊಡಿಸಬೇಕು. ಹಣ ಬಂದವರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕರಾದ ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES