ಚಾಮರಾಜನಗರ : ಕೇರಳ ರಾಜ್ಯದಲ್ಲಿ ರೂಪಾಂತರ ಕೊರೋನಾ ಹೆಚ್ಚಳ ಹಿನ್ನಲೆ ಇಂದು ಬೆಳ್ಳಂ ಬೆಳಗ್ಗೆ ಕೇರಳ ಗಡಿ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಎರಡು ಗಂಟೆಗೂ ಹೆಚ್ಚು ಕಾಲ ಖುದ್ದು ಪರಿಶೀಲನೆ ನಡೆಸಿದರು.
ಕಳೆದ ಮೂರು ದಿನದಿಂದಲ್ಲೂ ಚೆಕ್ಪೋಸ್ಟ್ನಲ್ಲಿ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸಲು ಅಧಿಕಾರಿಗಳನ್ನು ಮೂರು ತಂಡಗಳಾಗಿ ನಿಯೋಜಿಸಿದ್ದು, ತೀವ್ರ ಪರಿಶೀಲನೆ ಮಾಡಲಾಗುತ್ತಿದೆ. ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಗೂ 72 ಗಂಟೆಗಳ ಒಳಗಿನ ನೆಗಿಟಿವ್ ರಿಪೋರ್ಟ್ ಇದ್ರೆ ಮಾತ್ರ ಜಿಲ್ಲೆಗೆ ಎಂಟ್ರಿ ಅವಕಾಶ ನೀಡುತ್ತಿರುವ ಅಧಿಕಾರಿಗಳು ತೀವ್ರ ಕಾರ್ಯಚರಣೆ ಮಾಡಿದ್ದಾರೆ.
ಇನ್ನು ಕಳೆದ ಬಾರಿ ಚೆಕ್ಪೋಸ್ಟ್ಗಳಲ್ಲಿ ಹಣ ಪಡೆದು ವಾಹನಗಳನ್ನು ಬಿಡುತ್ತಿದ್ದರೂ ಎಂಬ ಆರೋಪ ಸಹ ಕೇಳಿ ಬಂದಿದ್ದ ಹಿನ್ನಲೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರೇ ಚೆಕ್ಪೋಸ್ಟ್ಗೆ ಆಗಮಿಸಿ ಸ್ವತಃ ಪರಿಶೀಲನೆ ನಡೆಸಿದ್ದಾರೆ.