ಬೆಂಗಳೂರು : ಖ್ಯಾತ ಹಿನ್ನೆಲೆ ಗಾಯಕಿ ಹರಿಣಿ ರಾವ್ ತಂದೆ ಸಾವಿನ ಹಿನ್ನಲೆಯಲ್ಲಿ ಕೋಟಿ ಕೋಟಿ ಸಾಲದ ವ್ಯವಹಾರವಿದ್ದು, ಇದೀಗ ಸಾವಿನ ಸುತ್ತ ಅನುಮಾನವು ಹುಟ್ಟಿಹಾಕಿಕೊಂಡಿದೆ.
ಕೆಲ ದಿನಗಳ ಹಿಂದೆ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಖಾಸಗಿ ಕಂಪನಿ ಮಾಲೀಕನಿಗೆ ಲೋನ್ ಕೊಡಿಸಲು ಎ.ಕೆ ರಾವ್ ಮುಂದಾಗಿದ್ದರು. ಡ್ಯಾನಿಯಲ್ ಆರ್ಮ್ ಸ್ಟ್ರಾಂಗ್ ಎಂಬುವರಿಂದ ಸಾಲ ಕೊಡಿಸಲು ಇಬ್ಬರಿಗೆ ಸೇರಿ ಸುಮಾರು 390 ಕೋಟಿ ಸಾಲ ಕೊಡಿಸಲು ಸಿದ್ಧರಾಗಿದ್ದರು.ಆದರೆ ಆರ್ಮ್ ಸ್ಟ್ರಾಂಗ್ 390 ಕೋಟಿ ಲೋನ್ ನೀಡಲು 5 ಕೋಟಿ 80 ಲಕ್ಷ ಮುಂಗಡ ಬಡ್ಡಿ ಪಡೆದುಕೊಂಡಿದ್ದ.
ನಂತರ ಮುಂಗಡ ಬಡ್ಡಿ ಪಡೆದುಕೊಳ್ತಾ ಇದ್ದಂತೆ ಡ್ಯಾನಿಯಲ್ ಫೋನ್ ಸ್ವಿಚ್ ಅಫ್ ಮಾಡಿ ನಾಪತ್ತೆಯಾಗಿದ್ದರು.ಬಳಿಕ ಹಣ ಕಳೆದುಕೊಂಡ ಗಿರೀಶ್ ಹಾಗೂ ಪಣಿತರನ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯರು ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ನವೆಂಬರ್ 18 ರಂದು ಡ್ಯಾನಿಯಲ್, ವಿವೇಕಾನಂದ, ಹಾಗೂ ರಾಘವ ಎಂಬುವರ ಮೇಲೆ ವಂಚನೆ ಕೇಸ್ ದಾಖಲಿಸಿದ್ದರು. ಇದರ ವಿಚಾರವಾಗಿ ಎಕೆ ರಾವ್ರನ್ನು ವಿಚಾರಣೆಗೆ ಕರೆದಿದ್ದಾರೆ ಪೊಲೀಸರು.
ವಿಚಾರಣೆಗೆ ಹಾಜರಾದ ಮರುದಿನವೇ ಯಲಹಂಕ ಬಳಿ ರೈಲ್ವೆಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದ ಎ.ಕೆ ರಾವ್. ಆಗಿದ್ದರೆ ಸಾವಿಗೂ ಹಿಂದಿನ ದಿನ ಎ.ಕೆ ರಾವ್ನ ವಿಚಾರಣೆಯಲ್ಲಿ ಏನಾಗಿರಬಹುದು ? ಎಂಬ ಶಂಕೆ ಕಾಡುತ್ತಿದೆ. ಸದ್ಯಕ್ಕೆ ಎ.ಕೆ ರಾವ್ ಸಾವಿನ ಬಗ್ಗೆ ತನಿಖೆ ಮಾಡ್ತಿರೋ ಯಶವಂತಪುರ ರೈಲ್ವೇ ಪೊಲೀಸರು ಹಾಗೂ ವಂಚನೆ ಕೇಸ್ ಬಗ್ಗೆ ಸುದ್ದಗುಂಟೆಪಾಳ್ಯ ಪೊಲೀಸರಿಂದ ತನಿಖೆ ತೀವ್ರಗೊಂಡಿದೆ.