Wednesday, October 30, 2024

ಬಾಲಾಪರಾಧಿ ಕಾಯ್ದೆ ಬಗ್ಗೆ ನಿಮಗೆಷ್ಟು ಗೊತ್ತಿದೆ

ಬಾಲಾಪರಾಧಿ ಕಾನೂನು ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ) 2000ಅನ್ನು (Juvenile Delinquency Law and the Juvenile Justice (Care and Protection of Children Act) 2000) ಬದಲಾಯಿಸಲು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ (Juvenile Justice (Care and Protection of Children) Act) 2015 ಅನ್ನು 2015ರಲ್ಲಿ ಸಂಸತ್ತಿನಲ್ಲಿ ಪರಿಚಯಿಸಿ ಅಂಗೀಕರಿಸಲಾಯಿತು.

ಕಾನೂನಿನ ಅಡಿಯಲ್ಲಿ, ಅಪರಾಧಗಳನ್ನು ನಿರ್ಧರಿಸುವಾಗ, ಕಾನೂನನ್ನು ಉಲ್ಲಂಘಿಸಿದ 16-18 ವರ್ಷ ವಯಸ್ಸಿನ ಬಾಲಾಪರಾಧಿಗಳನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಲು ಅನುಮತಿಸಲಾಯಿತು. ಅಪರಾಧದ ಸ್ವರೂಪ ಮತ್ತು ಅಪ್ರಾಪ್ತ ವಯಸ್ಕನನ್ನು ಬಾಲಾಪರಾಧಿಯಂತೆ ಅಥವಾ ಮಗುವಿನಂತೆ ವಿಚಾರಣೆಗೆ ಒಳಪಡಿಸಬೇಕೆ ಎಂದು ನಿರ್ಧರಿಸಲು ಬಾಲ ನ್ಯಾಯ ಮಂಡಳಿಗೆ (Juvenile Justice Board) ಅಧಿಕಾರ ನೀಡಲಾಗಿದೆ.

ಅಲ್ಲದೆ, 2012ರಲ್ಲಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ನಂತರ ಈ ನಿಬಂಧನೆಗೆ ಹೆಚ್ಚಿನ ಒತ್ತು ನೀಡಲಾಯಿತು. ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಒಬ್ಬ ಆರೋಪಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದರಿಂದ ಆತನನ್ನು ‘ಬಾಲಾಪರಾಧಿ’ ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ, ಕಾಯಿದೆಯು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (Central Adoption Resource Authority- CARA) ಶಾಸನಬದ್ಧ ಸಂಸ್ಥೆಯ ಸ್ಥಾನಮಾನವನ್ನು ನೀಡಿತು.

ಈ ಪ್ರಾಧಿಕಾರವು ತನ್ನ ಕಾರ್ಯಗಳನ್ನು (ಅನಾಥರು, ಪರಿತ್ಯಕ್ತರು ಮತ್ತು ಆಶ್ರಯ ಕೋರಿದ ಮಕ್ಕಳಿಗೆ ನೆಲೆ ಕಲ್ಪಿಸುವುದು)ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

RELATED ARTICLES

Related Articles

TRENDING ARTICLES