Wednesday, October 30, 2024

ಎಂಎಲ್​​​​ಸಿಯ ಫೇಸ್​​ಬುಕ್ ಖಾತೆಗೆ ಕನ್ನ ಹಾಕಿದ ಖದೀಮರು

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಫೇಸ್​​​ಬುಕ್ ಖಾತೆಯನ್ನ ಹ್ಯಾಕ್ ಮಾಡಿ ಹಣ ಕೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತದ್ದೇ ಒಂದು ಘಟನೆ ಶಿವಮೊಗ್ಗದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರಿನಲ್ಲಿ ಪರಿಚಯಸ್ಥರಿಗೆ ಮೆಸೇಜ್ ಮಾಡಿ ಪ್ಲೀಸ್ ಅರ್ಜೆಂಟ್ 15 ಸಾವಿರ ರೂ ಬೇಕು, ನನಗೆ ದುಡ್ಡು ಹಾಕಿದ್ರೆ 2 ಗಂಟೆಯ ಒಳಗೆ ವಾಪಸ್ ಕೊಡುವೆ ಎಂದು ಮೆಸೇಜ್ ಮಾಡಿದ್ದಾರೆ. ಈ ಮೆಸೇಜ್ ಅನ್ನು ನೋಡಿದ ಮಂಜುನಾಥ್ ರವರ ಪರಿಚಯಸ್ಥರು ಶಾಕ್ ಆಗಿರುವ ಘಟನೆ ನಡೆದಿದೆ.

15 ಸಾವಿರ ರೂಪಾಯಿಯನ್ನು ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಮೂಲಕ ಮಾಡಿದರೆ 2 ಗಂಟೆಯ ಒಳಗೆ ವಾಪಸ್ ನೀಡೋದಾಗಿ ಮೆಸೇಜ್​​​​ನಲ್ಲಿ ಬಂದಿದೆ ಇದನ್ನು ಓದಿದ ಕೆಲವರು ಅನುಮಾನ ಬಂದು ಆಯನೂರು ಮಂಜುನಾಥ್ ಅವರಿಗೆ ಕರೆ ಮಾಡಿದಾಗ ಖುದ್ದು ಅವರೇ ಶಾಕ್ ಆಗಿದ್ದಾರೆ.
ಆನಂತರ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ಸೈಬರ್ ಕ್ರೈಂ ನವರು ಪರಿಶೀಲನೆ ನಡೆಸಿದಾಗ ಆಯನೂರು ಮಂಜುನಾಥ್ ಅವರ ಫೇಸ್​​​​​​ಬುಕ್ ಖಾತೆಯನ್ನ ದುಷ್ಕರ್ಮಿಗಳು ಹ್ಯಾಕ್ ಮಾಡಿ ಅವರ ಹೆಸರಿನಲ್ಲಿ ಹಣ ಕೇಳುತ್ತಿರೋದು ತಿಳಿದುಬಂದಿದೆ. ಮೆಸೆಂಜರ್ ಮೂಲಕ ಅವರ ಪರಿಚಯಸ್ಥರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಸ್ಪಷ್ಟಪಡಿಸಿರುವ ಆಯನೂರು ಮಂಜುನಾಥ್, ದಯವಿಟ್ಟು ಇಂಥ ಮೆಸೇಜ್​​​​ಗಳು ಬಂದರೆ ಯಾರೂ ಹಣ ಕೊಡಬೇಡಿ ನನಗೆ ಹಣದ ಅವಶ್ಯಕತೆ ಇಲ್ಲ ಎಂದಿದ್ದಾರೆ. ದಯವಿಟ್ಟು ಯಾರು ಹಣ ಕೊಟ್ಟು ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.ಇದರ ವಿಷಯವಾಗಿ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES