ಬೆಂಗಳೂರು : ಕೇಂದ್ರದಿಂದ ಮೂರು ಕೃಷಿ ಕಾಯಿದೆ ವಾಪಾಸ್ ವಿಚಾರವಾಗಿ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ ರೈತ ಹೋರಾಟಕ್ಕೆ ಪ್ರಧಾನಿ ಮೋದಿ ಸರ್ಕಾರ ಮಣಿದಿದೆ ಎಂದಿದ್ದಾರೆ.
ರೈತರನ್ನು ಎದುರಾಕಿಕೊಂಡರೆ ಯಾವ ಸರ್ಕಾರವೂ ಉಳಿಯುವುದಿಲ್ಲ ಎಂಬ ಅರಿವು ಅವರಿಗಾಗಿದೆ. ಅಲ್ಲದೆ ಜಾತಿ, ಧರ್ಮ, ಲಿಂಗ, ಗಡಿ ಎಲ್ಲವನ್ನೂ ಮೀರಿ ರೈತರು ಒಗ್ಗೂಡಿ ಹೋರಾಟ ನಡೆಸಿದ್ದರು. ಇದು ಜನಾಂದೋಲನಕ್ಕೆ ಸಿಕ್ಕ ಜಯ ಎಂದು ನಾನು ಭಾವಿಸಿದ್ದೇನೆ.
ಆದರೆ ಹೋರಾಟ ಸಂಪೂರ್ಣವಾಗಿ ಕೈ ಬಿಡಲು ಸಾಧ್ಯವಿಲ್ಲ, ಇನ್ನೂ ನಮ್ಮ ಹಲವು ಬೇಡಿಕೆಗಳಿವೆ, ಅವನ್ನೂ ಸರ್ಕಾರ ಪರಿಗಣಿಸಬೇಕು ಹಾಗು ವಿದ್ಯುತ್ ಖಾಸಗೀಕರಣದ ಬಗ್ಗೆಯೂ ತಮ್ಮ ನಿರ್ಧಾರವನ್ನು ಮೋದಿ ಅವರು ತಿಳಿಸಿಲ್ಲ.ಅಷ್ಟೇ ಅಲ್ಲದೇ MSP ಬಗ್ಗೆ ಇನ್ನೂ ಮಾತನಾಡಿಲ್ಲ, ಆ ಬಗ್ಗೆಯೂ ಸ್ಪಷ್ಟತೆ ನಮಗೆ ಸಿಗಬೇಕು, ಕೇವಲ ಕಾಯಿದೆಗಳನ್ನು ಮಾತ್ರ ಕೈ ಬಿಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.ಹೀಗಾಗಿ ಇನ್ನುಳಿದಿರುವ ನಮ್ಮ ಬೇಡಿಕೆ ಈಡೇರಬೇಕಿದೆ.
ಸದ್ಯಕ್ಕೆ ಕೇಂದ್ರದ ನಿರ್ಧಾರ ಸ್ವಾಗತಾರ್ಹವಾಗಿದ್ದು ನಮ್ಮೆಲ್ಲ ರೈತರ ಒಕ್ಕೂಟಕ್ಕೆ ಸಂತೋಷವನ್ನು ತಂದಿದೆ ಎಂದೂ ಮಾಧ್ಯಮಗದೊಂದಿಗೆ ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು ಹೇಳಿಕೆ ನೀಡಿದ್ದಾರೆ.