Wednesday, October 30, 2024

ಕಾಂಗ್ರೆಸ್ ನಲ್ಲಿ ನಿಮ್ಮನ್ನು ಕೇಳುವವರೇ ಇಲ್ಲವಾಗಿದೆ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಸಿದ್ಧರಾಮಯ್ಯ ಅವರಿಗೆ ತಲೆ ಕೆಟ್ಟು ಹೋಗಿದ್ದು, ಹೀಗಾಗಿ ಅವರು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ.  ನನಗೆ ರಾಜಿನಾಮೆ ಕೇಳುವ ಸಿದ್ಧರಾಮಯ್ಯ, ಕಾಂಗ್ರೆಸ್ ನಲ್ಲೇ ಕಸವಾಗಿದ್ದಾರೆ ಅಂತಾ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಿದ್ಧರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. 

ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಸ್ಥಾನಕ್ಕೆ ಈಶ್ವರಪ್ಪ, ರಾಜಿನಾಮೆ ನೀಡಬೇಕೆಂದು ಮಾಜಿ ಸಿ.ಎಂ. ಸಿದ್ಧರಾಮಯ್ಯ ಕೇಳಿದ್ದು, ಇದಕ್ಕೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.  ಕರ್ನಾಟಕ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸದ ಬಗ್ಗೆ ಏನು ಉತ್ತರ ಕೊಡಬೇಕು ಅಂತಾ ‌ಅವರಿಂದ ನೋಡಲು ಆಗ್ತಿಲ್ಲ, ಕೇಳುವುದಕ್ಕೂ ಆಗ್ತಿಲ್ಲ.  ಅವರು ಮುಖ್ಯಮಂತ್ರಿ ಸ್ಥಾನ ಕಳೆದಕೊಂಡ ಬಳಿಕ ಹುಚ್ಚು ಹಿಡಿದಿದೆ.  ನನ್ನ ಇಲಾಖೆ ಬಗ್ಗೆ ಮಾತನಾಡಿದ್ದಾರೆ.  ಯಾವ ಕೆಲಸನೂ ಆಗ್ತಿಲ್ಲ.  ಒಂದು ನಿಮಿಷನೂ ಮಂತ್ರಿ ಆಗಿ ಮುಂದುವರಿಯಬಾರದು ಅಂದಿದ್ದಾರೆ.  ನಾಳೆ ಅಥವಾ ನಾಡಿದ್ದು ಬೆಂಗಳೂರಿನಲ್ಲಿ ನಮ್ಮ ಇಲಾಖೆಯಲ್ಲಿ ಅಧಿಕಾರಿಗಳು ಏನೇನು ಸಾಧನೆ ಮಾಡಿದ್ದಾರೆ ಅಂತಾ ಪಟ್ಟಿ ಸಮೇತ ಕೊಡ್ತೀನಿ ಅಂತಾ ಈಶ್ವರಪ್ಪ ಹೇಳಿದ್ದಾರೆ.  ಸ್ವತಂತ್ರ ಬಂದಾಗಿನಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಏನೇನು ಅಭಿವೃದ್ಧಿ ಕೆಲಸ ಆಗಿದೆ ಎನ್ನುವ ಬಗ್ಗೆ ಪಟ್ಟಿ ಸಮೇತ ಕೊಡ್ತೀನಿ.  ಇಷ್ಟೊಂದು ಅಭಿವೃದ್ಧಿ ಕೆಲಸ ಆಗುತ್ತಿರುವುದು ಸಹಿಸಲಾರದೇ ಸಿದ್ಧರಾಮಯ್ಯ ತಲೆ ಕೆಟ್ಟು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ.  ಏನು ಮಾತನಾಡುತ್ತಿದ್ದೀನಿ ಎಂಬ ಕಲ್ಪನೆ ಕೂಡಾ ಅವರಿಗೆ ಇಲ್ಲ.  ನಿಮ್ಮ ಪಕ್ಷದಲ್ಲಿ ನಿಮ್ಮ ಮಾತು ಕೇಳ್ತಿಲ್ಲ ಅಂತಾ ನೀವೆ ತಾನೇ ಮೈಸೂರು ಬಿಟ್ಟು ಹೋಗಿದ್ದಿರಾ.

ನಾಲ್ಕು ದಿನ ಹೋಗಿ ರೆಸಾರ್ಟ್ ನಲ್ಲಿ ಕುಳಿತಿದ್ದ ಸಿದ್ಧರಾಮಯ್ಯ, ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ನನ್ನ ಮಾತೇ ಕೇಳಿಲ್ಲ.  ನನ್ನ ಕೇಳದೆ ಮೇಯರ್ ಉಪ ಮೇಯರ್ ಮಾಡಿದ್ರು ಅಂತಾ ಹೋಗಿದ್ದೆ ಎಂದು ಹೇಳಿದ್ರು.  ಅಲ್ಲದೇ, ಸಿದ್ದರಾಮಯ್ಯ ಅವರ ಮಾತು ಕೇಳದೆ ಮೇಯರ್ ಉಪ ಮೇಯರ್ ಮಾಡಿದ್ದು ಅನ್ಯಾಯ ಎಂಬ ಮಾತನ್ನು ರಮೇಶ್ ಕುಮಾರ್ ಕೂಡ ಹೇಳಿದ್ರು.  ಕಾಂಗ್ರೆಸ್ ನಲ್ಲಿ ನೀವು ಪೂರಾ ಕಸದ ರೀತಿ ಆಗಿ ಬಿಟ್ಟಿದ್ದೀರಾ.  ಕಸದ ತೊಟ್ಟಿಯಲ್ಲಿರುವ ವಸ್ತು ಆದಹಾಗೆ ಆಗಿ ಬಿಟ್ಟಿದ್ದೀರಾ.  ಕಾಂಗ್ರೆಸ್ ನಲ್ಲಿ ನಿಮ್ಮನ್ನು ಕೇಳುವವರೆ ಇಲ್ಲ.  ಈಗ ನೀವು ನಮಗೆ ಹೇಳುವುದಕ್ಕೆ ಬರುತ್ತೀರಾ ಅಂತಾ ಈಶ್ವರಪ್ಪ, ಸಿದ್ಧರಾಮಯ್ಯ ವಿರುದ್ಧ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES