Wednesday, October 30, 2024

ಉಪ ಕದನ ಅಖಾಡಕ್ಕೆ ಸಿದ್ದರಾಮಯ್ಯ, ಡಿಕೆಶಿ ಎಂಟ್ರಿ..!

ಬೆಳಗಾವಿ: ರಾಜ್ಯದಲ್ಲಿ ಉಪ ಚುನಾವಣಾ ಕದನ ರಂಗೇರುತ್ತಿದೆ. ಉಪ ಕದನ ಚುನಾವಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ.

ಇಂದಿನಿಂದ 8 ದಿನಗಳ ಕಾಲ ಮಸ್ಕಿ, ಬಸವಕಲ್ಯಾಣ ಮತ್ತು ಬಿಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಇಂದು ಮತ್ತು ನಾಳೆ ಮಸ್ಕಿ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ. ಏಪ್ರೀಲ್ 7 ಮತ್ತು 8 ರಂದು ಬಸವ ಕಲ್ಯಾಣದಲ್ಲಿ ಮತಯಾಚನೆ ಮಾಡಲಿದ್ದಾರೆ. 9 ಮತ್ತು 10 ರಂದು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ. ಏ.11 ಮತ್ತು 12 ರಂದು ಬಸವಕಲ್ಯಾಣದಲ್ಲಿ ಸಭೆ ಉದ್ದೇಶಿಸಿ ಸಿದ್ದರಾಮಯ್ಯ ಬಹಿರಂಗ ಭಾಷಣ ಮಾಡಲಿದ್ದಾರೆ.

ಮತ್ತೊಂದೆಡೆ 2 ದಿನ ಮಸ್ಕಿಯಲ್ಲಿ ಡಿ.ಕೆ.ಶಿವಕುಮಾರ್ ಪ್ರಚಾರ ಮಾಡಲಿದ್ದಾರೆ. ತುರುವಿಹಾಳ್ ಗೆಲುವಿಗೆ ಸ್ಥಳೀಯ ನಾಯಕರ ಜೊತೆ ಸೇರಿ ಚುನಾವಣಾ ತಂತ್ರ ಹೆಣೆಯುತ್ತಿರುವ ಡಿ.ಕೆಶಿವಕುಮಾರ್. ಈ ಮೂಲಕ ಕಮಲ ಪಾಳಯದ ನಾಯಕರಿಗೆ ಡಿಕೆಶಿ ಟಕ್ಕರ್ ಕೊಡಲಿದ್ದಾರೆ.

 

RELATED ARTICLES

Related Articles

TRENDING ARTICLES