ಬೆಂಗಳೂರು : ಸಿಎಂ ವಿರುದ್ಧ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರ ಡಿಕೆಶಿ ಅವರು ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥ ಆರೋಪ ಕೇಳಿ ಬಂದಿದೆ.
ಮುಖ್ಯಮಂತ್ರಿ ಗಳ ವಿರುದ್ಧ ಸಚಿವರೇ 1200 ಕೋಟಿ ಆರೋಪ ಮಾಡಿರೋದ್ರಿಂದ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. ಪ್ರಮಾಣವಚನ ಬೋಧಿಸಿದ ರಾಜ್ಯಪಾಲರಿಗೆ ಸಚಿವರಾದ ಈಶ್ವರಪ್ಪ ದೂರು ನೀಡಿದ್ದಾರೆ ಎಂದರೆ ಅದು ಅವರು ಸ್ವಇಚ್ಚೆಯಿಂದಲೇ ಆರೋಪ ಮಾಡಿದಂತೆ ಅಲ್ವಾ ? ಒಳಗೆ ಏನೇನು ಇದೆಯೋ ಯಾರು ಬಲ್ಲರು. ಸಿಎಂ ರಾಜೀನಾಮೆ ಕೊಡಲಿ ಒಂದು ವೇಳೆ ಆರೋಪ ಸುಳ್ಳು ಅನ್ನೋದಾದರೇ ಸಂಪುಟದಿಂದ ಈಶ್ವರಪ್ಪ ಅವರನ್ನು ವಜಾ ಮಾಡಲಿ. ಮುಖ್ಯಮಂತ್ರಿಗಳು ಸ್ವ ಇಚ್ಚೆಯಿಂದ ರಾಜೀನಾಮೆ ಕೊಡುವುದು ಒಳ್ಳೆಯದು ಇಲ್ಲವೇ ಸಂಜೆಯೊಳಗೆ ಈಶ್ವರಪ್ಪನವರ ರಾಜೀನಾಮೆ ಪಡೆಯುವುದು ಒಳ್ಳೆಯದು. ವಿಪಕ್ಷ ನಾಯಕರ ಜೊತೆ ಚರ್ಚೆ ಮಾಡಿ ಹೋರಾಟದ ಬಗ್ಗೆ ತೀರ್ಮಾನಿಸ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.