Wednesday, October 30, 2024

ಸಿಡಿ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ : ಡಿ.ಕೆ.ಶಿವಕುಮಾರ್

ಕಲಬುರಗಿ: ಎಸ್ ಐಟಿಯಿಂದ ನನಗೆ ಯಾಕೆ ನೋಟಿಸ್ ಬರುತ್ತೆ. ಸಿಡಿ ಪ್ರಕರಣದ ಬಗ್ಗೆ ನಾನು ಮಾತನಾಡುವುದಿಲ್ಲ. ಸಿಡಿ ಲೇಡಿ ಪೋಷಕರು ಏನು ಹೇಳ್ತಾರೋ ಹೇಳಲಿ. ಸಿಡಿ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.   

ಸಿಡಿ ಪ್ರಕರಣದ ಬಗ್ಗೆ ನಾನು ಏನು ಮಾತಾಡಬೇಕು ಅದನ್ನು ಅಸೇಂಬ್ಲಿಯನ್ನು ಮಾತಾಡಿದ್ದೇನೆ. ನಾನು ಈಗ ಎಲೆಕ್ಷನ್ ಗೋಷ್ಕರ್ ಬಂದಿದ್ದೇನೆ, ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಸಂಸ್ಕೃತಿ ಸೇರಿದಂತೆ ಎಲ್ಲರ ಸಂಸ್ಕೃತಿಯನ್ನು ಜನ ಗಮನಿಸುತ್ತಿದ್ದಾರೆ. ಸಿಡಿಲೇಡಿ ಪೋಷಕರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅವರ ಸರ್ಕಾರ ಅವರ ಅನುಕೂಲಕ್ಕೆ ತಕ್ಕಂತೆ ಹೇಳಿಕೆಯನ್ನು ಕೊಡಿಸುತ್ತರಿರಬಹುದು. ಅವರು ಏನಾದರೂ ಹೇಳಿಕೆ ಕೊಡಲಿ, ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಲಗುರಗಿಯಲ್ಲಿ ಹೇಳಿದ್ದಾರೆ.

 

 

RELATED ARTICLES

Related Articles

TRENDING ARTICLES