Wednesday, October 30, 2024

ಬಸನಗೌಡ ಪಾಟೀಲ್ ಸಿಎಂ ವಿರುದ್ಧ ಹೇಳಿಕೆ ಬಿಜೆಪಿ ಕಾರ್ಯಕರ್ತರಿಗೆ ನೋವು ತಂದಿದೆ: ವಿಜಯೇಂದ್ರ

ಕಲಬುರಗಿ: ಶಾಸಕ ಬಸನಗೌಡ ಪಾಟೀಲ್ ಸಿಎಂ ವಿರುದ್ಧ ಹೇಳಿಕೆ ನೀಡುತ್ತಿರುವುದು ಕಾರ್ಯಕರ್ತರಿಗೆ ಬಹಳ ನೋವುಂಟು ಆಗುತ್ತಿದೆ  ಅಂತಾ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಹಿಂದೆ‌ ಕೂಡ ಅನೇಕ ಘಟನೆಗಳು ಪಕ್ಷಕ್ಕೆ ಮುಜುಗರವಾಗಿತ್ತು. ಈ ಎಲ್ಲಾ ಬೆಳವಣಿಗೆಗಳನ್ನ ಹೈಕಮಾಂಡ್ ಗಮನಿಸುತ್ತಿದ್ದು, ಅಮಿತ್ ಶಾ ಮತ್ತು ಅರುಣ್‌ಸಿಂಗ್ ಅವರು ಸಿಎಂ ಬದಲಾವಣೆ ಇಲ್ಲಾ ಅಂತಾ ಹೇಳಿದ್ದು, ಬಿಎಸ್‌ವೈರವರ ಕಾರ್ಯವೈಖರಿಯನ್ನ ಕೇಂದ್ರದ ನಾಯಕರು ಮೆಚ್ಚಿಕೊಂಡಿದ್ದಾರೆ ಅಂತಾ ವಿಜಯೇಂದ್ರ ಹೇಳಿದರು.

– ಅನಿಲ್‌ಸ್ವಾಮಿ, ಕಲಬುರಗಿ

RELATED ARTICLES

Related Articles

TRENDING ARTICLES