Wednesday, October 30, 2024

ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯುತ್ತಿಲ್ಲ: ಹೆಚ್.ವಿಶ್ವನಾಥ್

ಮೈಸೂರು: ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯುತ್ತಿಲ್ಲ. ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದಿರಿ? ಸದನ ಮುಗಿದರೆ ಸಾಕು ಎನ್ನು ರೀತಿ ಚರ್ಚೆ ನಡೆಯುತ್ತಿದೆ ಎಂದು ಎಂಎಲ್ ಸಿ ಹೆಚ್. ವಿಶ್ವನಾಥ್ ಮೈಸೂರಿನಲ್ಲಿ ಹೇಳಿದ್ದಾರೆ.

ನಾಳೆ ಸುಖಾಸುಮ್ಮನೆ ಮರ್ಯಾದೆ ಕಳೆದುಕೊಳ್ಳಬಾರದು ಎಂದು 6 ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಅದರಲ್ಲಿ ತಪ್ಪೇನಿದೆ ರಾಜಕಾರಣ ಎಂಬುವುದು ಕೇವಲ ಕೆಸರೆರಚಾಟ ಆಗಿದೆ. ಯಾರ ಮಾನ ಯಾರು ಕಳೆಯುತ್ತಾರೆ ಗೊತ್ತಿಲ್ಲ. ಸಚಿವರು ಪಕ್ಷಾಂತರಿಗಳು ಅಂತಾ ಕಾಂಗ್ರೆಸ್ ಉತ್ತರ ಪಡೆಯುತ್ತಿಲ್ಲ ಎಂದರು.

ಸಚಿವರ ಉತ್ತರ ಯಾವುದೋ ಪಕ್ಷಕ್ಕಲ್ಲ, ಅದು ರಾಜ್ಯದ ಜನರಿಗೆ. ನಿಮ್ಮದು ಏತಿ ಅಂದರೆ ಕೋತಿ ಎಂಬಂತಿದೆ. ನಿಮಗೆ ಉತ್ತರ ಬೇಕಿಲ್ಲ, ರಾಜ್ಯದ ಜನರಿಗೆ ಉತ್ತರ ಬೇಕಿದೆ ಎಂದು ಮೈಸೂರಿನಲ್ಲಿ ಎಂಎಲ್ ಸಿ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES