ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹಿನ್ನಲೆಯಲ್ಲಿ ಯುವತಿ ವಿಡಿಯೋ ಆಧರಿಸಿ ಯಾಕೆ ದೂರು ದಾಖಲಾಗುತ್ತಿಲ್ಲ? ಜೊಮ್ಯಾಟೋ ಬಾಯ್ ಕುರಿತ ಹಲ್ಲೆ ಕೇಸ್ ನಲ್ಲಿ ಒಂದು ನ್ಯಾಯ? ಈ ಅಶ್ಲೀಲ ಸಿಡಿ ಕೇಸ್ ನಲ್ಲಿ ಯುವತಿಗೆ ಒಂದು ನ್ಯಾಯನಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಲೈಗಿಂಕ ದೌರ್ಜನ್ಯ ಆಗಿದೆ ಎಂದು ವಿಡಿಯೋದಲ್ಲಿ ಯುವತಿ ತನ್ನ ಅಳಲನ್ನು ತೊಡಿಕೊಂಡಿದ್ದಳು. ಸಮಾಜದ ಮರ್ಯಾದೆಗೆ ಅಂಜಿ ಜಾಲತಾಣದಲ್ಲಿ 100 ಗೆ ಕರೆ ಮಾಡುವ ಮುಖಾಂತರ ದೂರನ್ನು ನೀಡಬಹುದಿತ್ತು.
ಈ ಹಿಂದೆ ಜೊಮ್ಯಾಟೋ ಕೇಸಲ್ಲಿ ಮಹಿಳೆ ಹಿತೇಶ್ ಚಂದ್ರಾಣಿ ಇನ್ಸ್ಟ್ರಾಗ್ರಾಂನಲ್ಲಿ ವಿಡಿಯೋ ಹರಿ ಬಿಟ್ಟು, ಜಾಲತಾಣದಲ್ಲಿ ದೂರು ದಾಖಲಿಸಿದ್ದಳು.
ಜೊಮ್ಯಾಟೋ ಬಾಯ್ ನಿಂದ ಹಲ್ಲೆ ನಡೆದಿದೆ ಎಂದು ಯುವತಿ ವಿಡಯೋದಲ್ಲಿ ಉಲ್ಲೇಖ ಮಾಡಿದ್ದಳು. ಕೂಡಲೆ ಪೊಲೀಸರು ಹುಡುಕಾಟ ನಡೆಸಿ ಡೆಲೆವರಿ ಬಾಯ್ ನನ್ನು ಪೊಲೀಸರು ವಶಕ್ಕೆ ಪಡೆದು. ನಂತರ ಮಹಿಳೆಯಿಂದ ಎಫ್ ಐಆರ್ ಮಾಡಿಸಿ ಆತನ್ನು ಪೊಲೀಸರು ಬಂಧಿಸಿದ್ದರು.
ಅದೇ ರೀತಿ ಸಿಡಿ ಯುವತಿ ಕೂಡ ವಿಡಿಯೋ ಮಾಡಿ ಒಂದು ವಾರ ಆಯಿತು. ಇನ್ನು ಪೊಲೀಸರು ಏಕೆ ಕ್ರಮ ಕೈಗೊಂಡಿಲ್ಲ? ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ಏಕೆ ವಶಕ್ಕೆ ಪಡೆದಿಲ್ಲ. ಪ್ರಭಾವಿ ಎಂಬ ಕಾರಣಕ್ಕೆ ಪೊಲೀಸರು ಕ್ರಮ ಕೈಗೊಳ್ತಾ ಇಲ್ವಾ? ಎಂಬುವುದು ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ