ಬೆಂಗಳೂರು: ಇಂದು ಬೆಂಗಳೂರಿನ ವಿಜಯನಗರದಲ್ಲಿ ಹೊಸಪೇಟೆಯ ಜಗದ್ಗುರುಗಳು, ಶ್ರೀ ಶೈಲದ ಜಗದ್ಗುರುಗಳು, ಸಿದ್ಧಗಂಗಾ ಪರಮಪೂಜ್ಯ ಶ್ರೀಗಳು, ಉಜ್ಜಿನಿಯ ಪೀಠ ಶ್ರೀಗಳ ನೇತೃತ್ವದಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ (OBC) ಮೀಸಲಾತಿಗೆ ಒತ್ತಾಯಿಸಿ ಬೃಹತ್ ಸಮಾವೇಶವನ್ನು ನಡೆಸುತ್ತಿದ್ದಾರೆ.
ಸಮಾವೇಶದಲ್ಲಿ 500 ಕ್ಕೂ ಹೆಚ್ಚು ಮಠಾಧೀಶರಿಂದ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದ ರೂವಾರಿಗಳು ಸಿಎಂ ಯಡಿಯೂರಪ್ಪನವರು ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾಕೆಂದರೆ ಪಂಚಮಶಾಲಿಗಳಿಂದ ಮೀಸಲಾತಿ ವಿಚಾರ ಬಹಳ ಜೋರಾಗಿದೆ. ಹೀಗಾಗಿ ಲಿಂಗಾಯತ ಸಮುದಾಯ ಬಿಎಸ್ ಯಡಿಯೂರಪ್ಪ ಬೆನ್ನಿಗೆ ಇಲ್ಲ ಅನ್ನೋ ಮಾತು ಶುರುವಾಗಿದೆ.
ಈ ಹಿನ್ನಲೆಯಲ್ಲಿ ತನ್ನ ವರ್ಚಸ್ಸನ್ನ ತೋರಿಸಲು ಬಿಎಸ್ ವೈ ಹಣೆದಿರೋ ತಂತ್ರಗಾರಿಕೆಯೇ ಈ ಸಮಾವೇಶ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಪುತ್ರ ವಿಜಯೇಂದ್ರನ ಪ್ಲಾನ್ ನಂತೆ ಆಪ್ತ ಶಿಷ್ಯರ ಮೂಲಕ ಸಮಾವೇಶಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಮಾವೇಶದ ಮೂಲಕ ಮೀಸಲಾತಿ ನೀಡುವಂತೆ ಸಿಎಂಗೆ ಮನವಿ ಸಲ್ಲಿಸುವುದು. ಈ ಮೂಲಕ ಹೈಕಮಾಂಡ್ ಗೂ ಒತ್ತಡ ಕ್ರಿಯೆಟ್ ಮಾಡಲು ಸಿಎಂ ಪ್ಲಾನ್. ಆಗ ಬಿಎಸ್ ವೈಗೆ ಹೈಕಮಾಂಡ್ ಸೂಚಿಸಿದರೆ ಯಡಿಯೂರಪ್ಪ ಮಧ್ಯಪ್ರವೇಶಿಸಿ ಸಂಧಾನ ಮಾಡುವುದು. ಈ ಮೂಲಕ ಸಿಎಂ ನಾನು ಸ್ರ್ಟಾಂಗ್ ಅಂತ ತೋರಿಸುವುದು ಸಿಎಂ ಪ್ಲಾನ್ ಎನ್ನಲಾಗಿದೆ. ಇನ್ನು ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಉಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಆಗಮಿಸುವ ಸ್ವಾಮಿಗಳಿಗೆ ಗುರು ಕಾಣಿಕೆಯನ್ನು ಮರೀಸ್ವಾಮಿ ಹಾಗೂ ಎಂ.ರುದ್ರೇಶ್ ನೀಡುತ್ತಾರೆ ಎಂದು ಒಕ್ಕೂಟದ ಪರ ಹೇಳಿಕೆ ನೀಡಿದ್ದಾರೆ.