ಬೆಂಗಳೂರು: ಚನ್ನಪಟ್ಟಣ ಬಳಿ ಇರುವ 13-16 ಎಕರಡ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಠಿ ಮಾಡಿ ಖಾತೆ ಮಾಡಿಸಕೊಂಡಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಕಲಿ ಖಾತೆ ಸೃಷ್ಠಿಮಾಡೋದು ಯೋಗೇಶ್ವರ್ ಹುಟ್ಟುಗುಣು. ಸುಳ್ಳು ದಾಖಲೆ ಸೃಷ್ಠಿ ಮಾಡಿ ತಮ್ಮ ಮಗಳ ಹೆಸರಿಗೆ ಖಾತೆ ಮಾಡಿಸಿದ್ದಾರೆ. ಸಿ.ಪಿ.ಯೋಗೇಶ್ವರ್ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗುತ್ತಿದೆ. ಎಂದು ರಾಜಕೀಯ ಎದುರಾಳಿ ಸಿ.ಪಿ.ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಮ್ಮ ಕುಟುಂಬ ಯಾರಿಗೂ ಹೆದರಲ್ಲ, ರಾಜಿ ಮಾಡಿಕೊಳ್ಳಲ್ಲ. ಪ್ರಧಾನ ಮಂತ್ರಿಯನ್ನ ದೇಶಕ್ಕೆ ಕೊಟ್ಟ ಕುಟುಂಬ ನಮ್ಮದು. ಇನ್ನೂ ಒಬ್ಬ ಮಂತ್ರಿಗೆ ನಾನು ಹೆದರುತ್ತೇನಾ? ಇಂತಹ ಮಂತ್ರಿಗಳು, ಮಂತ್ರಿ ಸ್ಥಾನಗಳನ್ನ ಎಷ್ಟು ನೋಡಿಲ್ಲ ಮಂತ್ರಿಯಾಗಲು ಹೊರಟಿರುವ ಸಿ.ಪಿ.ಯೋಗೇಶ್ವರ್ಗೆ ಹೆಚ್ ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.