ಬೆಂಗಳೂರು: ಡಿಸೆಂಬರ್ 15 ರಂದು ನಡೆದ ಮೇಲ್ಮನೆ ಕಲಾಪದ ಗಲಾಟೆ ತಲೆ ತಗ್ಗಿಸುವಂತೆ ಮಾಡಿದೆ. ಈ ಗದ್ದಲದ ತನಿಖೆಗೆ ಸದನ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಆರಂಭ ಆದಾಗಿನಿಂದಲೂ ಅಪಸ್ವರಗಳೂ ಕೇಳಿ ಬರುತ್ತಿವೆ. ಆದರೆ ಈಗ ಬಿಜೆಪಿ ಸದಸ್ಯರು ರಾಜೀನಾಮೆ ಕೊಟ್ಟು ತಮ್ಮ ಅಸಮಾಧಾನವನ್ನು ಹೊಹಾಕಿದ್ದಾರೆ.
ಡಿಸೆಂಬರ್ 15 ರಂದು ನಡೆದ ಮೇಲ್ಮನೆ ವಿಶೇಷ ಕಲಾಪದಲ್ಲಿ ನಡೆದ ಗಲಾಟೆ ಪ್ರಕರಣ ಉಪಸಭಾಪತಿ ಆತ್ಮಹತ್ಯೆಗೂ ಕಾರಣವಾಗಿತ್ತು. ಇದರಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದ್ದು. ಈ ದುರ್ಘಟನೆಗೆ ಮೂರು ಪಕ್ಷದ ಸದಸ್ಯರು ಕೂಡ ಕಾರಣಕರ್ತರಾಗಿದ್ದರು. ಈ ಘಟನೆಗೆ ನೇರ ಕಾರಣಕರ್ತರು ಯಾರು ಅಂತ ಪತ್ತೆ ಹಚ್ಚಲು ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಮತ್ತು ಮರಿತಿಬ್ಬೇಗೌಡರ ನೇತೃತ್ವದಲ್ಲಿ ಸದನ ಸಮಿತಿ ರಚನೆ ಮಾಡಲಾಗಿತ್ತು. ಆದರೆ ಈಗ ಆ ಸಮಿತಿಯಲ್ಲಿದ್ದ ಇಬ್ಬರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.
ಸದಸ್ಯರ ರಾಜೀನಾಮೆ ಬಗ್ಗೆ ಮಾತನಾಡಿದ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ, ಮೊದಲನೆಯದಾಗಿ ಇವತ್ತು ಸಮಿತಿಯ ಸಭೆ ನಡೆಸಿದ್ದೇವೆ. ಆದರೆ ಇವತ್ತಿನ ಸಭೆಯಲ್ಲಿ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ಆ ರಾಜೀನಾಮೆಯನ್ನ ಅಂಗೀಕಾರ ಮಾಡೋ ಅಧಿಕಾರ ಕಾನೂನಿನಲ್ಲೇ ಇಲ್ಲ. ಸಮಿತಿ ಅಧ್ಯಕ್ಷನಾಗಿರೋದರಿಂದ ನಾನು ರಾಜೀನಾಮೆ ಅಂಗೀಕರಿಸೋ ಅಧಿಕಾರ ನನಗೆ ಇಲ್ಲ ಅಂದಿದ್ದಾರೆ.
ಸದನ ಸಮಿತಿಯಲ್ಲಿ ಮರಿತಿಬ್ಬೇಗೌಡರು ಅಧ್ಯಕ್ಷರಾಗಿದ್ದು, ಬಿಜೆಪಿಯ ಹೆಚ್.ವಿಶ್ವನಾಥ್, ಎಸ್ ವಿ ಸಂಕನೂರು, ಕಾಂಗ್ರೆಸ್ನಿಂದ ಬಿ.ಕೆ.ಹರಿಪ್ರಸಾದ್ ಹಾಗೂ ಆರ್.ಬಿ ತಿಮ್ಮಾಪುರ ಸದನ ಸಮಿತಿಯ ಸದಸ್ಯರಾಗಿದ್ದರು. ಆದರೆ ಗದ್ದಲ ನಡೆದ ಸಂದರ್ಭದಲ್ಲಿ ನಾವು ಸೇರಿದಂತೆ ಮೂರು ಪಕ್ಷದ ಸದಸ್ಯರು ಕಲಾಪದಲ್ಲೇ ಇದ್ದೆವೆ. ಹಾಗಾಗಿ ಈ ತನಿಖೆಗೆ ನಮ್ಮನ್ನು ನೇಮಿಸೋದು ಸರಿಯಲ್ಲ ಅಂತ ಇದ್ದಕ್ಕಿದ್ದಂತೆ ಎಂಎಲ್ಸಿ ವಿಶ್ವನಾಥ್ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.
ಇದೇ ಸದನ ಸಮಿತಿಗೆ ಸಂಬಂಧಿಸಿದಂತೆ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಮೊದಲ ಸಭೆ ಕರೆದಿದ್ದರು. ಆದರೆ ಈ ಸಭೆ ನಡೆಯುತ್ತಿರುವ ಸಮಯದಲ್ಲೇ ಹಳ್ಳಿಹಕ್ಕಿ ರಾಜೀನಾಮೆ ನೀಡಿದ್ದಾರೆ. ಇನ್ನೂ ಇದೇ ಸಮಿತಿಯ ಸದಸ್ಯರಾಗಿರುವ ಸಂಕನೂರು ಕೂಡ ಸಮಿತಿ ಸಭೆಗೆ ಗೈರಾಗಿ ಸದನ ಸಮಿತಿಯಿಂದ ದೂರ ಉಳಿಯುವ ಮುನ್ಸೂಚೆ ನೀಡಿದ್ದಾರೆ.