ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಭಯವಿದೆ, ಇದನ್ನು ಸ್ವತಃ ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ..! ಇವತ್ತು ಮೈಸೂರಿನಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಿಎಂ, ತನಗೆ ಸ್ವತಂತ್ರ ನಿರ್ಧಾರ ಕೈಗೊಳ್ಳೋಕೆ ಆಗ್ತಿಲ್ಲ ಅಂದಿದ್ದಾರೆ..!
‘ನನ್ನದು ಮೈತ್ರಿ ಸರ್ಕಾರ. ಏನಾದ್ರು ಗಟ್ಟಿ ನಿರ್ಧಾರ ತಗೊಂಡ್ರೆ ನನ್ನನ್ನು ಖಾಲಿ ಮಾಡಿಸ್ತಾರೆ. ಹಿಂದೆಯೂ ಮೈತ್ರಿ ಸರ್ಕಾರ, ಈಗಲೂ ಮೈತ್ರಿ ಸರ್ಕಾರ. ಈ ಪರಿಸ್ಥಿತಿಯಲ್ಲೂ ನಾನು ಒಳ್ಳೆಯ ಕೆಲ್ಸ ಮಾಡೋ ಪ್ರಯತ್ನ ಮಾಡ್ತೀನಿ. ನಾನೂ ಪೊಲಿಟಿಕಲ್ ಮ್ಯಾನೇಜ್ಮೆಂಟ್ ಕಲಿತ್ತಿದ್ದೇನೆ. ಆದ್ರಿಂದ 5 ವರ್ಷ ಮುಖ್ಯಮಂತ್ರಿ ಆಗಿರ್ತೀನಿ, ತೊಂದ್ರೆ ಇಲ್ಲ” ಅಂತ ಕುಲಪತಿಗಳ ಎದುರು ರಾಜಕೀಯ ಇಕ್ಕಟ್ಟು ಒಪ್ಪಿಕೊಂಡಿದ್ದಾರೆ.
ಮೈತ್ರಿ ಸರ್ಕಾರ ಅಂದ್ರೆ ಇನ್ನೊಬ್ಬರ ಮುಲಾಜಿ ಒಳಗಾಗಿರಲೇ ಬೇಕು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯವೇ. ಯಾವ ಡಿಸಿಷನ್ ಗಳನ್ನೂ ಹೇಳ್ದೆ-ಕೇಳ್ದೆ ತೆಗೆದುಕೊಳ್ಳೋಕೆ ಆಗಲ್ಲ. ಈ ಹಿಂದೆಯೂ ಸಿಎಂ, ”ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ. ಜನ್ರ ಮುಲಾಜಿನಲ್ಲಿ ಇಲ್ಲ” ಅಂದಿದ್ರು. ಈಗ ಮತ್ತೊಮ್ಮೆ ಬೇರೆ ರೀತಿಯಲ್ಲಿ ಪುನರುಚ್ಛರಿಸಿದ್ದಾರಷ್ಟೇ..!
ಸಿಎಂ ಕುಮಾರಸ್ವಾಮಿ ಅವ್ರಿಗೆ ಕಾಂಗ್ರೆಸ್ ಭಯ..!
TRENDING ARTICLES