ಧಾರವಾಡ : ವಿಧಾನ ಪರಿಷತನ ಸಭಾಪತಿ ವಿಚಾರದಲ್ಲಿ ಅವಿಶ್ವಾಸ ಮಂಡನೆ ವೇಳೆ ನಡೆದ ಗಲಾಟೆಗೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಕ್ಷಮೆಯಾಚಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು ನನ್ನ ಜೀವಮಾನದಲ್ಲಿಯೇ ಇಂತಹ ಘಟನೆ ನೋಡಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸುಧೀರ್ಘ ರಾಜಕೀಯ ಜೀವನದಲ್ಲಿ ಇಷ್ಟೊಂದು ನಾಚಿಕೆಯಾಗಿರಲಿಲ್ಲ ಎಂದ ಹೊರಟ್ಟಿ, ಘಟನೆ ನೋಡಿ ಅತ್ತಿದ್ದೇನೆ ಎಂದರು. ದೇಶದಲ್ಲಿಯೇ ಅತ್ಯಂತ ಗೌರವ ಪಡೆದಿದ್ದ ಕರ್ನಾಟಕದ ವಿಧಾನ ಪರಿಷತನಲ್ಲಿ ನಡೆದ ಘಟನೆ ನೋವು ತಂದಿದೆ. ಗಲಾಟೆ ಮಾಡಿದವರ ಮೇಲೆ ನಿರ್ಧಾಕ್ಷಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದೆವೆ ಎಂದರು. ಇನ್ನು ವಿಧ್ಯಾಗಮ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಬಸವರಾಜ ಹೊರಟ್ಟಿ, ಶಿಕ್ಷಕರು ಮನೆ ಮನೆಗೆ ಹೋಗಿ ಪಾಠ ಮಾಡುವ ಬದಲು ಶಾಲೆಯಲ್ಲಿಯೇ 10 ವಿಧ್ಯಾರ್ಥಿಗಳಿಗೆ ಒಂದು ಬ್ಯಾಚ್ ನಂತೆ ಪಾಠ ಮಾಡಲು ಅವಕಾಶ ಕೊಡಲಿ ಎಂದು ಆಗ್ರಹಿಸಿದರು.