ಬೆಂಗಳೂರು: ಸಭಾಪತಿ ಸ್ಥಾನಕ್ಕಾಗಿ ಕೈ ಮಿಲಾಯಿಸಿದ ಜನಪ್ರತಿನಿಧಿಗಳು ರಾಜ್ಯದ ಮಾನ ಕಳೆದಿದ್ದಾರೆ. ರಾಜ್ಯದಲ್ಲಿ ಅನೇಕ ಸಮಸ್ಯಗಳು ತಾಂಡವಾಡುತ್ತಿದ್ದರೂ ಅವುಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಸಭಾಪತಿ ಸ್ಥಾನಕ್ಕಾಗಿ ಕಿತ್ತಾಡುತ್ತಿದ್ದಾರೆ.
ಕಿತ್ತಾಡಿ ಸುಸ್ತಾದ ಬಳಿಕ ಬಿಜೆಪಿ, ಜೆಡಿಎಸ್ ಒಟ್ಟಾಗಿ ಸೇರಿ ಸಭಾಪತಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿತ್ತು. ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ರಾಜೀನಾಮೆ ನೀಡಲು ಸೂಚಿಸಬೇಕು ಅಂತಾ, ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ಲಿಖಿತ ರೂಪದಲ್ಲಿ ಸಹಿ ಮಾಡಿ ಕೊಡಲಾಗಿತ್ತು. ಸಭಾಪತಿ ಅವಿಶ್ವಾಸ ನಿರ್ಣಯ ಗವರ್ನರ್ ಅಂಗಳದಲ್ಲಿ ಇದ್ದು, ಯಾವ ನಿರ್ಧಾರ ಹೊರ ಬೀಳುತ್ತೆ ಅಂತಾ ಕಾಯುತ್ತಿವೆ. ಅಲ್ಲದೇ ರಾಜ್ಯಪಾಲರ ನಿರ್ಧಾರದ ಮೇಲೆ ಮುಂದೇನು ಮಾಡಬೇಕು ಅಂತಾ ರಣತಂತ್ರ ಹೆಣೆಯುತ್ತಿವೆ.
ನಿನ್ನೆ ನಡೆದ ಘಟನೆಯನ್ನು ಎರಡು ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳಲು ಲೆಕ್ಕಾಚಾರ ಹಾಕುತ್ತಿವೆ. ಕಾಂಗ್ರೆಸ್ ಗೆ ಸಂಖ್ಯಾ ಬಲ ಕಡಿಮೆ ಇದ್ದರೂ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ಕೊಡಿಸದೇ ಗಲಾಟೆ ಮಾಡಿತು ಅಂತ ಬಿಜೆಪಿ ಬಿಂಬಿಸಲು ಪ್ರಯತ್ನಿಸುತ್ತದೆ. ಇತ್ತ ಕಾಂಗ್ರೆಸ್ ಸಭಾಪತಿ ಗೌರವಕ್ಕೆ ಧಕ್ಕೆ ತಂದು, ಉಪಸಭಾಪತಿ ಕುಸಿರಿ ಗಲಭೆಗೆ ಕಾರಣವಾಯಿತು. ಅಲ್ಲದೇ ಜೆಡಿಎಸ್, ಬಿಜೆಪಿಗೆ ಬೆಂಬಲ ನೀಡಿದೆ. ಇದರಿಂದ ಜೆಡಿಎಸ್ ಕಮ್ಯುನಿಲ್ ಪರ ಅಂತ ಬಿಂಬಿಸಿ ಅಲ್ಪಸಂಖ್ಯಾತ ಓಟ್ ಪಡೆಯಲು ಸಜ್ಜಾಗಿದೆ. ಹಾಗೆಯೇ ಬಿಜೆಪಿ ಏನೇ ತಂತ್ರ ಹೆಣೆದರು ಅದಕ್ಕೆ ನಾವು ಪ್ರತಿತಂತ್ರ ಹೆಣೆದು ಹೊರಾಟಕ್ಕೆ ಸಿದ್ಧ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.