ಬೆಂಗಳೂರು: ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದ್ದ ಅಧಿವೇಶನ ಇಂದು ಆರಂಭವಾಗುತ್ತಿದೆ. ಬಜೆಟ್ ಅಧಿವೇಶನ ಬಿಟ್ಟರೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ವರ್ಷಕ್ಕೆ ಮೂರು ಬಾರಿ ಮಾತ್ರ ನಡೆಯುತ್ತದೆ. ಅನಿರ್ಧಿಷ್ಟಾವಧಿಗೆ ಮುಂದೂಡಿದ ನಂತರ ಅಧಿವೇಶನ ಬರಲು ನಾಲ್ಕು ತಿಂಗಳು ಕಾಯಬೇಕು. ಆದರೆ ಸಭಾಪತಿ ಹಾಗೂ ಸರಕಾರದ ಜಟಾಪಟಿ ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಿದ ಐದು ದಿಗಳಲ್ಲಿ ಮತ್ತೊಮ್ಮೆ ಒಂದು ದಿನದ ಪರಿಷತ್ ಅಧಿವೇಶನ ನಡೆಯಲಿದೆ. ನಾಳೆ ಒಂದು ದಿನ ನಡೆಯುವ ಈ ಅಧಿವೇಶನ ರಾಜಕೀಯ ಹಾವು ಏಣಿ ಆಟಕ್ಕೆ ವೇದಿಕೆಯಾಗಲಿದೆ.
ನಾಳೆ ನಡೆಯಲಿರುವ ಕಲಾಪದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಮೇಲಿನ ಚರ್ಚೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದ್ದು, ಒಂದು ವೇಳೆ ಜೆಡಿಎಸ್ ಕಾಯಿದೆಗೆ ಬೆಂಬಲ ಕೊಟ್ಟೆರೆ ಬಿಜೆಪಿ ಜೊತೆ ಮೈತ್ರಿ ಎಂಬ ವಿಚಾರಕ್ಕೆ ಮತ್ತೆ ರೆಕ್ಕೆ ಪುಕ್ಕ ಮೂಡಲಿದೆ.