ವಿಜಯಪುರ : ವ್ಯಕ್ತಿಯೋರ್ವ ಮರದ ತುದಿಗೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ನಗರದ ಐನಾಪುರ ಕ್ರಾಸ್ ಬಳಿ ಇರುವ ಅರಳಿ ಮರದ ತುದಿಗೇರಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಅಂದಾಜು 50 ವರ್ಷದ ಅಪರಿಚಿತ ವ್ಯಕ್ತಿಯು ನೇಣಿಗೆ ಶರಣಾಗಿದ್ದಾನೆ. ಮರದ ತುದಿಯಲ್ಲಿ ಶವ ನೇತಾಡುತ್ತಿರುವದನ್ನು ಗಮನಿಸಿದ ಸ್ಥಳಿಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೋಲಿಸರು ಶವವನ್ನು ಕೆಳಗಿಳಿಸಲು ಹೈರಾಣಾದರು. ಶವ ಪೋಸ್ಟ ಮಾಟಂಗ್ ಶಿಪ್ಟ ಮಾಡಲಾಗಿದೆ. ಈ ಕುರಿತು ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.