Monday, November 25, 2024

ದೇವತೆಗಳ ಹಣ್ಣು ಪಪ್ಪಾಯ ಹಣ್ಣಿನಲ್ಲಿ, ಸೃಷ್ಟಿಯ ವೈಚಿತ್ರ್ಯ – ಹಣ್ಣೊಳಗೊಂದು ಕಾಯಿ-ಹೂವು….!!

 ಶಿವಮೊಗ್ಗ: ಈ ಪಪ್ಪಾಯ ಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ. ಈ ಹಣ್ಣಿನ ವೈಶಿಷ್ಟ್ಯವೇ ಬೇರೆ. ಇದು ದೇವತೆಗಳ ಹಣ್ಣು ಎಂತಲೂ ಕರೆಯುತ್ತಾರೆ. ಇದೇ ದೈವ ಲೀಲೆಯೋ, ಸೃಷ್ಟಿಯೋ ವೈಚಿತ್ಯವೋ ಗೊತ್ತಿಲ್ಲ. ಆದರೆ, ಇಲ್ಲಿ ಈ ಪಪ್ಪಾಯ ಹಣ್ಣಿನೊಳಗೊಂದು ಪಪ್ಪಾಯ ಕಾಯಿ ಬಿಟ್ಟು ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ, ಕಾಯಿ ಜೊತೆಗೆ ಹೂವು ಕೂಡ ಬಿಟ್ಟು, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಶಿವಮೊಗ್ಗದ ಸುಧಾಕರ್ ಮತ್ತು ಭಾಗ್ಯಲಕ್ಷ್ಮೀ ದಂಪತಿ ಇದು ನಂಬಲು ಆಗುತ್ತಿಲ್ಲ. ಯಾಕಂದ್ರೆ ಈ ಪಪ್ಪಾಯ ಹಣ್ಣಿನೊಳಗೊಂದು, ಪಪ್ಪಾಯ ಕಾಯಿ ಮತ್ತು ಹೂ ಬಿಟ್ಟು ಹುಬ್ಬೇರಿಸುವಂತೆ ಮಾಡಿದೆ.

ದೇವತೆಗಳ ಹಣ್ಣು ಎಂದೇ ಕರೆಯಲ್ಪಡುವ ಪಪ್ಪಾಯ ಹಣ್ಣಿನಲ್ಲಿ ಸೃಷ್ಟಿಯ ವೈಚಿತ್ರ್ಯವೊಂದು ಪ್ರಶ್ನೆ ಮಾಡುವಂತೆ ಮಾಡಿದೆ. ಹೌದು, ಶಿವಮೊಗ್ಗದ ನವುಲೆ ಬಡಾವಣೆ ನಿವಾಸಿಯಾಗಿರುವ ಸುಧಾಕರ್ ಅವರ ತೋಟದಲ್ಲಿ ಬಿಟ್ಟಿರುವಂತಹ ಈ ಸಣ್ಣ ತಳಿಯ ಪಪ್ಪಾಯದಲ್ಲಿ ಈ ರೀತಿಯ ಅಚ್ಚರಿಗೆ ಕಾರಣವಾಗುವಂತೆ ಮಾಡಿದೆ. ಶಿವಮೊಗ್ಗದಿಂದ ಕೇವಲ 15 ಕಿ.ಮೀ. ದೂರವಿರುವ ಆಯನೂರಿನ ಹಣಗೆರೆಕಟ್ಟೆ ರಸ್ತೆಯ ಇಟ್ಟಿಗೆಹಳ್ಳಿ ಗ್ರಾಮದಲ್ಲಿರುವ ಸುಧಾಕರ್ ಅವರ ತೋಟದಲ್ಲಿ ಕಳೆದ 3-4 ವರ್ಷಗಳ ಹಿಂದೆಯಷ್ಟೇ, ಬೆಂಗಳೂರಿನಿಂದ ಸುಮಾರು 200 ಗಿಡಗಳನ್ನು ತಂದು ನೆಟ್ಟಿದ್ದರು. ವಿಶೇಷವಾಗಿ ಪಪ್ಪಾಯ ಹಣ್ಣುಗಳು, ದೊಡ್ಡದಾಗಿದ್ದು, ಆದರೆ, ಈ ತಳಿ ಸಣ್ಣ ಹಣ್ಣಿನ ತಳಿಗಳಾವೆ. ಇದೇ ತಳಿಯ ಹಣ್ಣಾಗಿರುವ ಈ ಪಪ್ಪಾಯ ಮರದಲ್ಲಿ ನಿನ್ನೆ ಹಣ್ಣು ಬಿಟ್ಟಿದ್ದು, ಇದನ್ನು ಮನೆಗೆ ತಂದು ಪತ್ನಿ ಭಾಗ್ಯಲಕ್ಷ್ಮಿಗೆ ನೀಡಿದ್ದಾರೆ. ತಿನ್ನಲು ಹಣ್ಣನ್ನು ಕತ್ತರಿಸಿದ ನಂತರವಷ್ಟೇ, ಇವರಿಗೆ ಸೃಷ್ಟಿಯ ವೈಚಿತ್ರ್ಯ ಅರಿವಾಗಿದೆ. ಈ ಪಪ್ಪಾಯ ಹಣ್ಣಿನಲ್ಲಿ ಬೀಜಗಳ ಬದಲಾಗಿ ಮತ್ತೊಂದು ಪಪ್ಪಾಯ ಕಾಯಿ ಬಂದಿದ್ದು, ಇದರ ಜೊತೆಗೆ ಹೂವು ಕೂಡ ಬಿಟ್ಟಿದೆ. ಸಾಮಾನ್ಯವಾಗಿ ಎಲ್ಲಾ ಪಪ್ಪಾಯ ಹಣ್ಣಿನಲ್ಲಿ ಕಪ್ಪು ಬಣ್ಣದ ಬೀಜ ಇರುತ್ತದೆ. ಆದರೆ, ಈ ಪಪ್ಪಾಯ ಹಣ್ಣಿನಲ್ಲಿ ಬೀಜದ ಬದಲಾಗಿ, ಹಣ್ಣಿನ ಕಾಯಿ ಮತ್ತು ಹೂವು ಬಿಟ್ಟು ಆಶ್ಚರ್ಯ ಮೂಡಿಸಿದೆ.

ಅಂದಹಾಗೆ, ಈ ಸೃಷ್ಟಿಯ ವೈಚಿತ್ರ್ಯ ಕಂಡಿರುವ ಕೃಷಿಕ ಸುಧಾಕರ್, ಇದೀಗ ಈ ರೀತಿ ಹಣ್ಣು ಬಿಟ್ಟಿರುವುದಕ್ಕೆ, ಜೋತಿಷ್ಯದ ಮೊರೆ ಹೋಗಲು ಕೂಡ ಚಿಂತಿಸಿದ್ದಾರೆ. ಈ ವಿಶೇಷ ಹಣ್ಣು ಕಂಡು ಸುಧಾಕರ್ ಕುಟುಂಬ ತಬ್ಬಿಬ್ಬಾಗಿದ್ದು, ತಮ್ಮ 2 ಎಕರೆ ಜಾಗದಲ್ಲಿ ಸುಮಾರು 200 ಗಿಡಗಳನ್ನು ಬೆಳೆಯುತ್ತಿರುವ ಕೃಷಿಕ ಸುಧಾಕರ್ ಗೆ ಇದೇ ಮೊದಲ ಬಾರಿಗೆ ಈ ರೀತಿಯ ಹಣ್ಣು ಕಂಡು ಬಂದಿದೆ. ಸಾಮಾನ್ಯವಾಗಿ, ತರಕಾರಿಗಳಲ್ಲಿ, ಈ ರೀತಿಯ ವಿವಿಧ ಕಲಾಕೃತಿಗಳಿಗೆ ಹೋಲಿಕೆಯಾಗುವುದನ್ನು ಕಾಣುವುದು ಸಾಮಾನ್ಯ. ಆದರೆ, ಹಣ್ಣಿನೊಳಗೆ ಮತ್ತೊಂದು ಹಣ್ಣು ಬಿಡುವ ರೀತಿಯಲ್ಲಿ ಕಂಡು ಬರುವುದು ಅಪರೂಪ. ಇದನ್ನ ಕಂಡ ಸುಧಾಕರ್ ಕುಟುಂಬ ಸೇರಿದಂತೆ, ನೆರೆಹೊರೆಯವರು, ಈ ವಿಶೇಷ ಹಣ್ಣನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ತರಕಾರಿ ಮತ್ತು ಹಣ್ಣುಗಳಲ್ಲಿ ಈ ರೀತಿ ವೈಶಿಷ್ಟ್ಯಗಳು ಕಂಡು ಬಂದು ಅಚ್ಚರಿ ಕಾರಣವಾಗುವುದು, ಅಪರೂಪವಾದರೂ ಕೂಡ, ಇದಕ್ಕೆ ವೈಜ್ಞಾನಿಕವಾಗಿ ಕಾರಣವೇನು ಎಂಬುದು, ಕೃಷಿ ತಜ್ಱರಿಗೆ ಮತ್ತು ಕೃಷಿ ವಿಜ್ಱಆನಿಗಳ ಗಮನಕ್ಕೆ ತಂದು ಅರಿಯುವುದು ಒಳಿತು.

-ಗೋ.ವ. ಮೋಹನಕೃಷ್ಣ

RELATED ARTICLES

Related Articles

TRENDING ARTICLES