ಶಿವಮೊಗ್ಗ: ಶಿವಮೊಗ್ಗದ ಗೆಜ್ಜೆನಹಳ್ಳಿಯಲ್ಲಿಯ ಕ್ರಶರ್ ವೊಂದರಲ್ಲಿಅಕಸ್ಮಾತ್ತಾಗಿ, ಶೀಟ್ ಮೇಲಿದ್ದ ಕಲ್ಲು ಹಾಗೂ ಮಣ್ಣು ಬಿದ್ದು, ಇಲ್ಲಿ, ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಇಬ್ಬರು ಸಾವು ಕಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬಿಹಾರ ಮೂಲದ ಜಿಕೋಲಾಂಗ್ (25) ಹಾಗೂ ಟ್ರೈನಿಕ್‌ಟೋಜ್ (25) ಮೃತ ದುದೈವಿಗಳು.
ಈ ಘಟನೆ ಪರಿಣಾಮ ಓರ್ವ ಸ್ಥಳದಲ್ಲೇ ಮತ್ತೋರ್ವ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ. ಇನ್ನು ಕ್ರಶರ್ ಬೆಡ್ ಮೇಲೆ ಸಂಗ್ರಹವಾಗಿದ್ದ ಕಲ್ಲು ಹಾಗೂ ಪಕ್ಕದಲ್ಲೇ ಲೋಡಿನಲ್ಲಿದ್ದ ಟ್ರಾಲಿಯ ಕಲ್ಲು ಸಹ ಇವರ ಮೇಲೆ ಬಿದ್ದ ಘಟನೆ ನಡೆದಿದೆ. ಈ ವೇಳೆ ಕ್ರಶರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಜಿಕೋಲಾಂಗ್ ಸ್ಥಳದಲ್ಲೇ ಸಾವು ಕಂಡಿದ್ದರೆ ಟೋಜ್ ಇಂದು ಬೆಳಗ್ಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ. ಅದರಂತೆ, ಘಟನೆ ನಡೆಯುತ್ತಿದ್ದಂತೆ, ವಿನೋಬನಗರ ಸಬ್‌ಇನ್ಸ್‌ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನನ್ನು ಉಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದರೂ ಫಲಕಾರಿಯಾಗಿಲ್ಲ. ಮೃತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಶವ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.