ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ನಾನಾ ರೀತಿಯ ಬಿಸಿಬಿ ಚರ್ಚೆಗಳು ನಡೆಯುತ್ತಿವೆ. ಸುಶಾಂತ್ ಸಾವಿನ ಬಳಿಕ ಬಾಲಿವುಡ್ ಅಕ್ಷರಶಃ ಬೆತ್ತಲಾಗುತ್ತಿದೆ..! ಅಂತೆಯೇ ನಟಿ ಕಂಗನಾ ರಣಾವತ್ ಕೆಲವು ಫಿಲ್ಮ್ ಮೇಕರ್ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈಗ ಹೆಸರಾಂತ ಮೂವರು ಫಿಲ್ಮ್ ಮೇಕರ್ಗಳು ಸುಶಾಂತ್ ಸಾವಿಗೆ ಕಾರಣ ಅಂತ ಬಹಿರಂಗವಾಗಿ ಆರೋಪ ಮಾಡಿದ್ದಾರೆ.
ಹೌದು, ಕರಣ್ ಜೋಹರ್, ಆದಿತ್ಯ ಛೋಪ್ರಾ, ಮಹೇಶ್ ಭಟ್ ಸೇರಿ ಸುಶಾಂತ್ನನ್ನು ಕೊಂದಿದ್ದಾರೆ. ಕೆಲವು ಪತ್ರಕರ್ತರು ಹಾಗೂ ಜನ ಕೂಡ ಮಾನಸಿಕವಾಗಿ ಕಿರುಕುಳ ನೀಡಿ ಸುಶಾಂತ್ ಸಾವಿಗೆ ಹೊಣೆಯಾಗಿದ್ದಾರೆಂದು ಕಂಗನಾ ಗಂಭೀರ ಆರೋಪ ಮಾಡಿದ್ದಾರೆ.
“ ಕರಣ್ ಜೋಹರ್, ಆದಿತ್ಯ ಛೋಪ್ರಾ, ಮಹೇಶ್ ಭಟ್, ರಾಜೀವ್ ಮಸಂದ್, ರಕ್ತಹೀರುವ ರಣಹದ್ದುಗಳಂತಿರೋ ಮಾಧ್ಯಮ ಸುಶಾಂತ್ನನ್ನು ಬೆದರಿಸಿ, ಶೋಷಿಸಿ, ಕಿರುಕುಳ ನೀಡಿ ಕೊಂದಿವೆ’’ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಕರಣ್ ಜೋಹರ್ ತಾವು ದತ್ತುಪಡೆದಿರುವ ಮಕ್ಕಳ ಬಗ್ಗೆ ಬರೆದಿರುವ ಪುಸ್ತಕದ ಕುರಿತು ಕೂಡ ಕಂಗನಾ ಗರಂ ಆಗಿ ಟ್ವೀಟ್ ಮಾಡಿದ್ದಾರೆ.