Monday, February 3, 2025

ಪಬ್, ಬಾರ್ & ರೆಸ್ಟೋರೆಂಟ್ ಓಪನ್ ​​: ಮಾಲೀಕರು ಹಾಗೂ ಗ್ರಾಹಕರಿಗೆ ಪ್ರತ್ಯೇಕ ಮಾರ್ಗಸೂಚಿ!

ಬೆಂಗಳೂರು:  ದೇಶಾದ್ಯಂತ ಇಂದಿನಿಂದ ಅನ್​ಲಾಕ್​ 4.O ಜಾರಿಯಾಗಿದ್ದು, ಪಬ್​ ಬಾರ್​ ಅಂಡ್​ ಓಪನ್ ಆಗಿದೆ. ಲಾಕ್​ಡೌನ್​ನಿಂದಾಗಿ  6 ತಿಂಗಳಿಂದ ಬಂದ್ ಆಗಿತ್ತು. ಈ ಮುಂಚೆ ಬಾರ್​ಗಳಲ್ಲಿ ಪಾರ್ಸೆಲ್​ ಕೊಳ್ಳಲು ಮಾತ್ರ ಅವಕಾಶ ಇತ್ತು. ಆದರೆ ಈಗ ಗ್ರಾಹಕರು ಬಾರ್​ನಲ್ಲಿಯೇ ಮಧ್ಯ ಸೇವಿಸಲು ಅವಕಾಶ ಕಲ್ಪಸಲಾಗಿದೆ. ಇಪರ್ಯಾಸವೆಂದರೆ  ಬಾರ್​​ಗಳು ಓಪನ್​​​​​ ಆದ್ರೂ ಕೂಡ ಗ್ರಾಹಕರಿಲ್ಲದೆ ಸಂಪೂರ್ಣ ಖಾಲಿ ಖಾಲಿಯಾಗಿದೆ. ಗ್ರಾಹಕರಿಲ್ಲದೆ ಬಾರ್ ಅಂಡ್ ರೆಸ್ಟೋರೆಂಟ್ ಬಿಕೋ ಎನ್ನುತ್ತಿವೆ,  ಅನ್​ಲಾಕ್​ ಆದ್ರೂ ಬಾರ್​​ಗಳತ್ತ ಮುಖ ಮಧ್ಯಪ್ರಿಯರು ಮಾಡದೇ ಇರುವುದು ಆಶ್ಚರ್ಯಕರವಾಗಿದೆ.

ಸದ್ಯ ಬಾರ್​​ಗಳಲ್ಲಿ ಕೇವಲ ಶೇ. 30 ರಷ್ಟು ಕೆಲಸಗಾರರ ಮಾತ್ತರ  ಬಳಸಲಾಗುತ್ತಿದೆ. ಅಲ್ಲದೆ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಕೊಡಬೇಕು ಎಂದು ಸೂಚಿಸಿದೆ.

ಬಾರ್​ ಮಾಲೀಕರು ಹಾಗೂ ಗ್ರಾಹಕರು ಪಾಲಿಸಬೇಕಾದ ಮಾರ್ಗಸೂಚಿಗಳೆಂದರೆ,

  1. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ
  2. ಕೆಲಸಗಾರರು ಗ್ರಾಹಕರ ಕೈಗೆ ಮದ್ಯ ಕೊಡುವಂತಿಲ್ಲ
  3. ರೂಂ, ಕ್ಯಾಬಿನ್ ಗಳ ಬಾಗಿಲ ಬಳಿ ಮದ್ಯ ಅಥವಾ ಆಹಾರ ಇಡಬೇಕು
  4. ಕೆಲಸಗಾರರು ಗ್ಲೌಸ್ ಧರಿಸಿ ಕೆಲಸ ಮಾಡಬೇಕು.
  5. ಗುಂಪು ನಿಯಂತ್ರಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು
  6. ಪಾರ್ಕಿಂಗ್ ಜಾಗದಲ್ಲಿರುವ ಸಿಬ್ಬಂದಿ ಮಾಸ್ಕ್/ ಫೇಸ್ ಕವರ್ ಧರಿಸಬೇಕು
  7. ವಾಹನಗಳು ನಿಲ್ಲುವ ಜಾಗದಲ್ಲಿ ಸ್ಯಾನಿಟೈಸ್ ಮಾಡಿರಬೇಕು
  8. ಎಂಟ್ರಿ ಮತ್ತು ಎಕ್ಸೀಟ್​ಗೆ ಪ್ರತ್ಯೇಕ ವ್ಯವಸ್ಥೆ ಮಾಡಿರಬೇಕು
  9.  ಆರು ಅಡಿ ಸಾಮಾಜಿಕ ಅಂತರವನ್ನು ಕಾಪಾಡಬೇಕು
  10. ಬಫೆ ವ್ಯವಸ್ಥೆಗೆ ಅವಕಾಶ, ಸಾಮಾಜಿಕ ಅಂತರ ಕಡ್ಡಾಯ
  11. ಡಿಜಿಟಲ್ ಮೂಲಕ ಬಿಲ್ ಪಾವತಿಗೆ ಉತ್ತೇಜನ
  12. ಒಬ್ಬ ಗ್ರಾಹಕ ತೆರಳಿದ ಬಳಿಕ ಟೇಬಲ್ ಶುಚಿಗೊಳಿಸುವುದು
  13. ಶೌಚಾಲಯ, ಕೈ ತೊಳೆಯುವ ಜಾಗ, ಟೇಬಲ್ ಶುದ್ಧವಾಗಿರಬೇಕು

 

 

 

 

RELATED ARTICLES

Related Articles

TRENDING ARTICLES