ಕೋಲಾರ : ಕೋಲಾರ ನಗರದಲ್ಲಿ ನಡೀತಿರೋ ಅಮೃತ್ ಸಿಟಿ ಯೋಜನೆಯ ಕಾಮಗಾರಿಯು ಕಳಪೆಯಿಂದ ಕೂಡಿದೆ ಅನ್ನೋ ಆರೋಪ ಬಲವಾಗಿ ಕೇಳಿ ಬರ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ನಡೀತಿರೋ ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರ ಅತೃಪ್ತಿಯಿದೆ. ಯೋಜನೆಯ ಕಂಟ್ರಾಕ್ಟರ್ಗಳ ಜೊತೆಗೆ ಕೆಲವು ಭ್ರಷ್ಟರು ಈ ಕಾಮಗಾರಿಗಳ ಗುಣಮಟ್ಟವನ್ನು ಹಾಳು ಮಾಡ್ತಿದ್ದಾರೆ ಅನ್ನೋ ಟೀಕೆಯು ವ್ಯಕ್ತವಾಗಿದೆ.
ದೇಶದಲ್ಲಿನ ನಗರಗಳನ್ನು ಸುಂದರವಾಗಿಸಬೇಕು ಅನ್ನೋ ಕಲ್ಪನೆಯ ಈಡೇರಿಕೆಗಾಗಿ ಐದು ವರ್ಷದ ಹಿಂದೆ ಅಮೃತ್ ಸಿಟಿ ಅನ್ನೋ ಯೋಜನೆಯು ಜಾರಿಗೆ ಬಂದಿದೆ. ಅಮೃತ್ ಸಿಟಿ ಯೋಜನೆಗಾಗಿ ಸುಮಾರು 200 ಕೋಟಿ ರುಪಾಯಿ ವೆಚ್ಚವನ್ನು ನಿಗದಿ ಮಾಡಲಾಗಿದೆ. ಈ ಕಾಮಗಾರಿಗಾಗಿ ಶೇಕಡ 50 ರಷ್ಟು ಕೇಂದ್ರ ಸರ್ಕಾರ, ಶೇಕಡ 30 ರಷ್ಟು ರಾಜ್ಯ ಸರ್ಕಾರ ಹಾಗೂ ಶೇಕಡ 20 ರಷ್ಟು ಸ್ಥಳೀಯ ಸಂಸ್ಥೆಗಳು ಭರಿಸುತ್ತಿವೆ. ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಹಲವಾರು ನಗರಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಶುರು ಮಾಡಲಾಗಿದೆ. ಆದ್ರೆ, ಕೋಲಾರದಲ್ಲಿ ನಡೀತಿರೋ ಅಮೃತ್ ಸಿಟಿ ಯೋಜನೆಯ ಕಾಮಗಾರಿಯು ಕಳಪೆಯಿಂದ ಕೂಡಿದೆ ಅನ್ನೋ ಆರೋಪವು ಕೇಳಿಬಂದಿದೆ.
ಕೋಲಾರ ನಗರದಲ್ಲಿ ಐದು ವರ್ಷಗಳಿಂದಲೂ ಅಮೃತ್ ಯೋಜನೆಯ ಅಡಿಯಲ್ಲಿ ವಿವಿಧ ಕಾಮಗಾರಿಗಳು ನಡೀತಿವೆ. ಮಳೆ ನೀರು ಹರಿಯುವ ಬೃಹತ್ ಚರಂಡಿ, ಸಿಮೆಂಟ್ ರಸ್ತೆಗಳು, ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸೇರಿದಂತೆ ಹಲವಾರು ಕಾಮಗಾರಿಗಳು ಈ ಯೋಜನೆ ಅಡಿಯಲ್ಲಿ ಸೇರಿದೆ. ಆದ್ರೆ, ಕಾಮಗಾರಿಯ ಗುಣಮಟ್ಟ ಮಾತ್ರ ಕಳಪೆ ಅನ್ನೋದು ಸ್ಥಳೀಯ ಆರೋಪವಾಗಿದೆ.
ಕೋಲಾರದಲ್ಲಿ ನಡೀತಿರೋ ಅಮೃತ್ ಸಿಟಿ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದೆ ಅನ್ನೋ ದೂರು ಕೇಳಿ ಬರ್ತಿದೆ. ಕ್ರಮ ಜರುಗಿಸ್ತೇವೆ ಅಂತ ಭರವಸೆ ಕೊಡೋ ಜನಪ್ರತಿನಿಧಿಗಳು ಆ ಬಗ್ಗೆ ಮುಂದೆ ಮಾತನಾಡದೇ ಮೌನವಾಗ್ತಿದ್ದಾರೆ ಅನ್ನೋ ಟೀಕೆಯೂ ಇದೆ.
ಒಟ್ನಲ್ಲಿ, ನಗರದಲ್ಲಿ ಶಾಶ್ವತವಾದ ಅಭಿವೃದ್ದಿ ಕಾರ್ಯಗಳು ನಡೆಯಲಿ ಅಂತ ಸರ್ಕಾರಗಳು ಕೊಟ್ಟಿರುವ ಅನುದಾನವು ಸದ್ಭಳಕೆಯಾಗುವಂತೆ ಸಂಬಂಧಿಸಿದವ್ರು ಕ್ರಮ ವಹಿಸಬೇಕಾಗಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.