Monday, February 3, 2025

ದೇವನಹಳ್ಳಿಯಲ್ಲಿ ನಿರಂತರವಾಗಿ ಶಾಸನಗಳು ಪತ್ತೆ !

ದೇವನಹಳ್ಳಿ : ಬೆಂಗಳೂರಿನ ಕೂಗಳತೆ ದೂರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಾದ್ಯಂತ ನಿರಂತರವಾಗಿ ಶಾಸನಗಳು ಪತ್ತೆ ಆಗುತ್ತಿವೆ. ಅನೇಕ ರಾಜ ವಂಶಸ್ಥರ ಕಾಲದ ಶಾಸನಗಳು ಪತ್ತೆ ಆಗುತ್ತಿದ್ದು, ಪತ್ತೆಯಾದ ಶಾಸನಗಳನ್ನು ಸ್ಥಳಿಯರು ಸಂರಕ್ಷಣೆ ಮಾಡುತ್ತಿದ್ದಾರೆ. ದೇವನಹಳ್ಳಿ ತಾಲೂಕಿನ ಗುರುಸಿದ್ದಯ್ಯ ಎಂಬ ಶಿಕ್ಷಕ ಶಾಸನಗಳ ಸಂರಕ್ಷಣೆಯಲ್ಲಿ ನಿರಂತರವಾಗಿ ತೊಡಗಿದ್ದಾನೆ. ಇನ್ನೂ ದೇವನಹಳ್ಳಿ ತಾಲೂಕಿನಾದ್ಯಂತ 5 ವರ್ಷಗಳಿಂದ ಸುಮಾರು 50 ಕ್ಕೂ ಹೆಚ್ಚು ಶಾಸನಗಳು ಪತ್ತೆಯಾಗಿವೆ. ಗಂಗರು, ಚೋಳರು, ಹೊಯ್ಸಳ, ರಾಷ್ಟ್ರಕೂಟರು, ನೊಳಂಬರು,ವಿಜಯನಗರ ಕಾಲದ ಶಾಸನಗಳು ಇಲ್ಲಿಯ ವರೆಗೆ ಪತ್ತೆಯಾಗಿವೆ ಜೊತೆಗೆ ಆವತಿ ನಾಡಪ್ರಭು ಕಾಲದಲ್ಲಿನ ಶಾಸನಗಳು ದೇವನಹಳ್ಳಿ ತಾಲೂಕಿನಲ್ಲಿ ಪತ್ತೆಯಾಗಿವೆ. ಶಿಲಾ ಶಾಸನಗಳು, ವೀರಗಲ್ಲು ಶಾಸನಗಳು ಮತ್ತು ವಿಷ್ಣು ಶಾಸನಗಳು ವಿವಿಧ ರೀತಿಯ ಶಾಸನಗಳು ಸಿಕ್ಕಿವೆ. 8 ನೇ ಶತಮಾನದಿಂದ ಆಳ್ವಿಕೆ ಮಾಡಿದ ರಾಜ ವಂಶಸ್ಥರ ಕಾಲ ಶಾಸನಗಳು ಪತ್ತೆ ಆಗಿದ್ದು ಇನ್ನೂ ಅನೇಕ ಶಾಸನಗಳು ಪತ್ತೆ ಆಗಬೇಕಿದೆ, ಟಿಪ್ಪು ಹುಟ್ಟಿದ ಸ್ಥಳ , ನಾಡಪ್ರಭು ಕೆಂಪೇಗೌಡ ಜನ್ಮಸ್ಥಳ ಹೀಗೆ ಅನೇಕ ಮಹನೀಯರು ದೇವನಹಳ್ಳಿಯಲ್ಲಿ ಜನ್ಮ ತಾಳಿದ್ದಾರೆ ಜೊತೆಗೆ ಅನೇಕ ರಾಜ ವಂಶಸ್ಥರು ಈ ಭಾಗದಲ್ಲಿ ಆಳ್ವಿಕೆ ಮಾಡಿದ್ದಾರೆ ಈ ಹಿನ್ನಲೆಯಲ್ಲಿ ಶಾಸನಗಳು ನಿರಂತರವಾಗಿ ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಇಂತಹ ಶಾಸನಗಳನ್ನು ಪತ್ತೆ ಮಾಡಿ ಸಂರಕ್ಷಣೆ ಮಾಡಲು ಪುರಾತತ್ವ ಇಲಾಖೆ ಸಹ ಇದೆ ಆದ್ರೆ ಅದು ನೆಪ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಇತಿಹಾಸ ಹೊಂದಿರುವ ಶಾಸನಗಳನ್ನು ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂಬುದು ಸ್ಥಳಿಯರ ಆಕ್ರೋಶ. ದೇವನಹಳ್ಳಿ ಐತಿಹಾಸಿಕ ಟಿಪ್ಪು ಸುಲ್ತಾನ್ ಕೋಟೆ ಸಹ ಇದೆ ಅದನ್ನೂ ನಿರ್ವಹಣೆ ಸಹ ಯಾವ ಇಲಾಖೆ ಮಾಡುವುದಿಲ್ಲ. ಇನ್ನೂ ನಿಧಿ ಕಳ್ಳರ ಹಾವಳಿಯಿಂದ ಅನೇಕ ಶಾಸನಗಳು ಹಾಳಾಗಿವೆ. ನಿಧಿ ಪತ್ತೆ ಮಾಡಲು ಹೋದ ಸಂದರ್ಭದಲ್ಲಿ ಅನೇಕರು ಪ್ರಾಣ ಸಹ ಕಳೆದುಕೊಂಡಿದ್ದಾರೆ ಇಂತಹ ಪ್ರಕರಣಗಳು ಸಹ ದಾಖಲಾಗಿವೆ.

ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ.

RELATED ARTICLES

Related Articles

TRENDING ARTICLES