Monday, February 3, 2025

ಭೀಕರ ಅಪಘಾತದಲ್ಲಿ ಸಹೋದರ ದುರ್ಮರಣ..!

ದಕ್ಷಿಣ ಕನ್ನಡ: ಕಾರು ಮತ್ತು ಬೈಕ್ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರಿನ ನರಿಮೊಗರು ಶಾಲೆಯ ಬಳಿ ನಡೆದಿದೆ. ಮೃತರನ್ನ ಮಿಥುನ್(18) ಹಾಗೂ ಭವಿತ್(19) ಎಂದು ಗುರುತಿಸಲಾಗಿದೆ. ವೀರಮಂಗಳದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಇಬ್ಬರು ಸಹೋದರರು ಹಿಂತಿರುಗುತ್ತಿದ್ದ ವೇಳೆ ಈ ಭೀಕರ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ಮಿಥುನ್ ನರಿಮೊಗರು ಐಟಿಐ ವಿದ್ಯಾರ್ಥಿ, ಇನ್ನೋರ್ವ ಸೆಂಟ್ರಿಂಗ್ ವೃತ್ತಿ ಮಾಡಿಕೊಂಡಿದ್ದಾರೆ. ಇವರಿಬ್ಬರು ತಡರಾತ್ರಿ ಕಾರ್ಯಕ್ರಮ ಮುಗಿಸಿ ಹಿಂದುರುಗಿತ್ತಿದ್ದ ವೇಳೆ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಮೃತಪಟ್ಟಿದ್ದಾರೆ. ಸಂಪ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು

RELATED ARTICLES

Related Articles

TRENDING ARTICLES