Monday, February 3, 2025

ಶಿವಮೊಗ್ಗದಲ್ಲಿ ಏಳುವರೆ ಸಾವಿರಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ಶಿವಮೊಗ್ಗ : ಜಿಲ್ಲೆಯಲ್ಲಿ ಭಾನುವಾರ 163 ಸೋಂಕಿತರ ಪತ್ತೆಯಾಗಿದೆ. ನಾಲ್ವರು ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 127ಕ್ಕೇರಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೂ 7493 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಭಾನುವಾರ ಶಿವಮೊಗ್ಗ ತಾಲೂಕಿನಲ್ಲಿ 84, ಭದ್ರಾವತಿ 26, ಶಿಕಾರಿಪುರ 13, ಸಾಗರ 9, ತೀರ್ಥಹಳ್ಳಿ 1, ಹೊಸನಗರ 2, ಸೊರಬ 24, ಹೊರ ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಆಗಮಿಸಿದ 4 ಮಂದಿಯಲ್ಲಿ ಸೋಂಕು ತಗುಲಿರುವುದು ಧೃಡಪಟ್ಟಿದೆ. ಈ ನಡುವೆ, 94 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ 1642 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 185 ಮಂದಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 163 ಮಂದಿ ಕೋವಿಡ್ ಆರೈಕೆ ಕೇಂದ್ರದಲ್ಲಿ, 201 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 1008 ಮಂದಿ ಮನೆಯಲ್ಲಿ ಐಸೋಲೇಶನ್ ಗೆ ಒಳಗಾಗಿದ್ದಾರೆ. 85 ಮಂದಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದರಂತೆ, ಜಿಲ್ಲೆಯಲ್ಲಿ 3159 ಕಂಟೈನ್ಮೆಂಟ್ ವಲಯಗಳಿದ್ದು, 1062 ಕಂಟೈನ್ಮೆಂಟ್ ವಲಯಗಳನ್ನು ಡಿ-ನೋಟಿಫೈಡ್ ಮಾಡಲಾಗಿದೆ.

RELATED ARTICLES

Related Articles

TRENDING ARTICLES