ಚಿಕ್ಕಮಗಳೂರು : ಒಂದು ಮದ್ವೆಯಾಗೇ ಸಾಕಪ್ಪಾ-ಸಾಕು ಈ ಜನ್ಮಕ್ಕೆ ಮದ್ವೆ ಸಹವಾಸನೇ ಬೇಡ, ಮದ್ವೆಯಾದ ದಿನವೇ ನನ್ನ ಖುಷಿ ಕಳ್ಕೊಂಡೆ ಅಂತ ಅದೆಷ್ಟೋ ಸತಿ-ಪತಿಗಳು ಪಶ್ಚಾತಾಪ ಪಡ್ತಾರೆ. ಮದ್ವೆ ಇಂತಾ ರೋದ್ನೆ ಅಂದ್ರೆ ಮದ್ವೆಯನ್ನೇ ಆಗ್ತಿರ್ಲಿಲ್ಲ ಅಂತಾರೆ. ಆದ್ರೆ, ಈ ಬಿನ್ನಾಣಗಿತ್ತಿಗೆ ಮಾತ್ರ ಮದ್ವೆ ಆಗೋದೇ ಖಯಾಲಿ. ಅದು ಒಂದಲ್ಲ.. ಎರಡಲ್ಲ.. ಮೂರಲ್ಲ.. ಐದು ಬಾರಿ ಕಲ್ಯಾಣ…! ಇಷ್ಟಕ್ಕೆ ಮುಗೀಲಿಲ್ಲ ಆಕೆ ಬಿನ್ನಾಣ…! 38ರ ಹರೆಯದ ಆಂಟಿಗೆ ಈ ಬಾರಿ ಆರನೇ ಬಾರಿಗೆ ಕ್ಲೀನ್ ಬೋಲ್ಡ್ ಆಗಿದ್ದು 22ರ ಯುವಕ. ಏನಪ್ಪಾ ಇದು ಕಾಫಿನಾಡ ಮದುವೆ ಮ್ಯಾಟ್ರು ಅಂತೀರಾ…! ಈ ಸ್ಟೋರಿ ನೋಡಿ…
ಕಂಬಿಹಳ್ಳಿ ಚಂದ್ರುಗು ಇವ್ಳೆ ಹೆಂಡ್ತಿ. ಹನಿಕೆ ಬಸವರಾಜನ ಪ್ರೇಮಿಯೂ ಇವ್ಳೆ. ಬೆಂಗಳೂರಿನ ಬೇಕ್ರಿ ಕಿರಣನ ಹನಿಕೇಕೂ ಈಕೆಯೇ. ರಮೇಶನ ರಾಧೆಯೂ ಇವ್ಳೆ. ಈಗ ರಂಗೇನಹಳ್ಳಿ ಚಂದ್ರನ ಚಂದ್ರಚಕೋರಿಯೂ ಇವ್ಳೆ. ಅಫ್‍ಕೋರ್ಸ್, 38ರ ಹಾಸುಪಾಸಿಗೆ ಐದನೇ ಮದ್ವೆಯಾದ ಈಕೆಯ ಕೊನೆ ಪ್ರೇಮಿ ವಯಸ್ಸು ಕೇವಲ 22. ಪ್ರೀತಿಗೆ ಕಣ್ಣಿಲ್ಲ ನಿಜ. ಬುದ್ಧಿಯೂ ಇಲ್ಲದಂತಾಯ್ತು. ಜನ ಒಂದ್ ಮದ್ವೆ ಆಗೇ, ಅಯ್ಯೋ ದೇವ್ರೆ ನೆಮ್ದಿ ಕೊಡಪ್ಪಾ ಅಂತ ಊರಲ್ಲಿರೋ ದೇವ್ರಿಗೆಲ್ಲಾ ಕೈ ಮುಗೀತಾರೆ. ಆದ್ರೆ, ಚಿಕ್ಕಮಗಳೂರಿನ ಈಕೆ ಐದು ಮದ್ವೆಯಾಗಿ ಎರಡು ಮಕ್ಕಳಿದ್ರು 38ನೇ ವಯಸ್ಸಿಗೆ ಆರನೇ ಬಾರಿ ಹಸೆಮನೆ ಏರಿ, ಕೈಗೆ ಕರಿಬಳೆ ಧರಿಸಿ 22ರ ಯುವಕನ ಜೊತೆ ಸಂಸಾರ ಶುರು ಮಾಡಿದ್ದಾಳೆ. ಈಕೆಯನ್ನ ವರಿಸಿದ 22ರ ಯುವಕ ಕೂಡ ನಂಗೆ ಇವ್ಳೆ ಬೇಕು. ನಾನು ಇವಳ ಜೊತೆಯೇ ಇರ್ತೀನಿ ಅಂತ ಹಣೆಬರಹ ಇದ್ದಂತೆ ಆಗುತ್ತೆಂದು ನವಜೀವನ ಶುರುಮಾಡಿದ್ದಾನೆ. ಆದ್ರೆ, ಈಕೆ ಎಲ್ಲೆಲ್ಲಿ, ಯಾರ್ಯಾರಿಗೆ, ಎಷ್ಟು ಮದ್ವೆ ಆಗಿದ್ದಾಳೆ ಅನ್ನೋದ್ನ ಅವಳ ಬಾಯಲ್ಲಿ ನೀವೇ ಕೇಳಿ.
ನಾನು ಹಿಂದೆ ಐದು ಜನರನ್ನ ಮದುವೆಯಾಗಿದ್ದೆ. ಅವರೆಲ್ಲರೂ ಹಿಂಸೆ ಕೊಡ್ತಿದ್ರು ಅದಕ್ಕೆ ಅವರನ್ನೆಲ್ಲಾ ಬಿಟ್ಟು ಇವನನ್ನ ಮದ್ವೆಯಾಗಿದ್ದೇನೆ ಅಂತಾಳೆ ಈ ಆಂಟಿ. ಇವನನ್ನ ಬಿಡಲ್ಲ. ಇವನ ಜೊತೆ ಕೊನೆ ತನಕ ಇರ್ತೀನಿ ಅಂತಿದ್ದಾಳೆ. ಆದ್ರೆ, ಆ ಮಾತು ಎಷ್ಟು ಸತ್ಯ ಅನ್ನೋದು ದೇವ್ರೇ ಬಲ್ಲ. ವಿಷ್ಯ ಅಂದ್ರೆ, ಈಕೆ ಐದು ಮದುವೆಯಾಗಿರೋದ್ನ ಹೊಸ ಗಂಡನಿಗೆ ಹೇಳಿಲ್ಲ. ಮದ್ವೆ ಆದ ಮೇಲೆ ಅವನಿಗೂ ಗೊತ್ತಾಗಿರೊದು. ಅಪ್ಪ-ಅಮ್ಮನಿಲ್ಲದೆ ಪ್ರಿಯಾಳ ಐದನೇ ಗಂಡ ಅಕ್ಕಂದಿರ ಜೊತೆ ಬೆಳೆದವನು. ನಮ್ಮ ಮನೆ ಪಕ್ಕದಲ್ಲೇ ರೂಂ ಮಾಡಿಕೊಂಡಿದ್ದಳು. ಒಂದು ತಿಂಗಳಿಂದ ಲವ್ ಮಾಡ್ತಿದ್ವಿ. ನಾನೇ ಈಕೆಯನ್ನ ಇಷ್ಟ ಪಟ್ಟು ಮದ್ವೆ ಆದೆ, ಈಕೆಗೊಂದು ಬಾಳು ಕೊಡ್ತೀನಿ ಅಂತಿದ್ದಾನೆ. ನಾನು ಈಕೆಯನ್ನ ಬೀಡೋದಿಲ್ಲ. ಇವಳೇ ನನ್ನ ಹೆಂಡ್ತಿ ಅಂತ ಇನ್ಮುಂದೆ ಸಂಸಾರ ಮಾಡ್ತೀವಿ ಅಂತ ಯುವಕ ಖುಷಿಯಾಗಿದ್ದಾನೆ.
ಒಟ್ಟಾರೆ, ಈಕೆ ಉಳಿದ ಐದು ಮದ್ವೆ ಆದ ಕಡೆಯೂ ಕೆಲ ಆರೋಪಗಳಿವೆ. ಮದ್ವೆ ಆಗೋದು. ಸಿಕ್ಕಿದ್ದು ದೋಚೋದು. ಗಂಡನ ಆಸ್ತಿ ಕೇಳೋದು ಮಾಡ್ತಾಳಂತೆ. ಎರಡನೇ ಗಂಡನ ಮನೆಯಿಂದ 40 ಗ್ರಾಂ ಚಿನ್ನದ ಸರ ಕದ್ದಿದ್ದಾಳೆಂಬ ದೂರು ಕೂಡ ದಾಖಲಾಗಿದೆಯಂತೆ. ಅದೇನೆ ಇರ್ಲಿ. ಅವಳಿಗೆ ಇವನೇ ಬೇಕು. ಇವನಿಗೆ ಅವಳೇ ಬೇಕು. ಇವ್ನು 22 ವರ್ಷದ ಯುವಕ ಅನ್ನೋದ್ರಿಂದ ನೋ ಪ್ರಾಬ್ಲಂ ಅಂತಿದ್ದಾಳೆ. ಇವನಿಗೆ ಆಕೆ ಐದು ಮದ್ವೆ ಆಗಿದ್ರು ಏನೂ ಇಲ್ವಂತೆ, ಸಂಸಾರ ಮಾಡ್ತಾನಂತೆ. ಏನೋ… 38ರ ಆಂಟಿ ಜೊತೆ ಹಸೆಮಣೆ ಏರಿರೋ 22ರ ಹರೆಯದ ಯುವಕನ ಬದುಕು ಹಸನಾಗಲಿ ಅನ್ನೋದು ನಮ್ಮ ಆಶಯ…
ಸಚಿನ್ ಶೆಟ್ಟಿ ಚಿಕ್ಕಮಗಳೂರು…