ವಿಜಯಪುರ : ಇಂದು ವಿಶ್ವ ಛಾಯಾಗ್ರಾಹಕರ ದಿನ. ವಿಜಯಪುರ ಜಿಲ್ಲೆಯ ವಾರ್ತಾ ಇಲಾಖೆಯ ಪೋಟೊಗ್ರಾಫರ್ ರಾಜು ಡವಳಗಿ ತೆಗೆದ ವಿಡಿಯೋ ಒಂದು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ತಾಯಿ ಹಕ್ಕಿ ತನ್ನ ಮೂರು ಮರಿಗಳಿಗೆ ಆಹಾರ ನೀಡುವ ದೃಶ್ಯವೊಂದು ಅದ್ಭುತವಾಗಿ ಮೂಡಿ ಬಂದಿದೆ. ವೈಲ್ಡ್ ಪೋಟೊಗ್ರಾಫಿ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ರಾಜು ಡವಳಗಿ ತಮ್ಮ ನಿಕಾನ್ 750850 ಕ್ಯಾಮರಾದಲ್ಲಿ ಈ ಅಪರೂಪದ ದೃಶ್ಯವನ್ನ ಸೆರೆಹಿಡಿದಿದ್ದಾರೆ. ವಿಶ್ವ ಛಾಯಾಗ್ರಾಹಕರ ದಿನದಂದು ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋ ಎಲ್ಲರ ಕಣ್ಮನ ಸೆಳೆಯುತ್ತಿದೆ. ಸಾಹಸ ಪ್ರವೃತ್ತಿಯುಳ್ಳ ರಾಜು ಡವಳಗಿ ಕಳೆದ 15 ವರ್ಷಗಳಿಂದ ವಿಜಯಪುರ ವಾರ್ತಾ ಇಲಾಖೆಯಲ್ಲಿ ಪೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2009ರ ಪ್ರವಾಹದ ಸಮಯದಲ್ಲಿ ಇವರು ತೆಗೆದ ಪೋಟೊಗಳು ಆಗಿನ ಸಿಎಂ ಯಡಿಯೂರಪ್ಪರ ಎದುರು ಪ್ರದರ್ಶನಗೊಂಡಿದ್ದವು..