ಶಿವಮೊಗ್ಗ: ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮೂರು ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇಂದು ಸ್ಥಳಕ್ಕೆ ಏಕಾಏಕೀ ಫೋಕ್ ಲೈನ್ ಜೊತೆ ಹೋದ ಪಾಲಿಕೆ ಅಧಿಕಾರಿಗಳು ಇಲ್ಲಿರುವ ಇಸ್ತ್ರಿ ಅಂಗಡಿ, ಟೀ ಅಂಗಡಿ ಮತ್ತು ತರಕಾರಿಯ ಗೂಡಂಗಡಿ ಸೇರಿದಂತೆ, ಮೂರು ಅಂಗಡಿಗಳ ತೆರವಿಗೆ ಮುಂದಾಗಿದ್ರು.
ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಸ್ಥಳಿಯ ಮುಖಂಡರು ಮತ್ತು ನಾಗರೀಕರು, ಪಾಲಿಕೆ ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ರು. ಈ ರೀತಿ ಏಕಾಏಕೀ, ಯಾವುದೆ ನೋಟಿಸ್ ನೀಡದೇ ತೆರವುಗೊಳಿಸಲು ಬಂದಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿ, ತೆರವಿಗೆ ವಿರೋಧ ವ್ಯಕ್ತಪಡಿಸಿದ್ರು. ಈ ವೇಳೆ, ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಸ್ಥಳೀಯರು ಪ್ರತಿಭಟನೆ ಕೂಡ ನಡೆಸಿದ್ರು. ಈ ಮೂರು ಗೂಡಂಗಡಿಗಳ ತೆರವಿಗೆ ಯಾರೋ ಪ್ರಭಾವಿಗಳ ಕುಮ್ಮಕ್ಕಿರಬೇಕೆಂದು ಆಪಾದಿಸಿದರಲ್ಲದೇ, ಸ್ಥಳದಲ್ಲಿಯೇ, ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಸ್ಥಳಕ್ಕೆ ಪಾಲಿಕೆ ಆಯುಕ್ತರು ಬರಬೇಕು ಅಲ್ಲದೆ, ಬಡವರು ಕಳೆದ ಹಲವಾರು ವರ್ಷಗಳಿಂದ ಇಲ್ಲಿಯೇ ವ್ಯಾಪಾರ ನಡೆಸಿಕೊಂಡು ಬಂದಿದ್ದು ಇದೀಗ ಏಕಾಏಕೀ ತೆರವುಗೊಳಿಸಲು ಮುಂದಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ರು. ಈ ಕೂಡಲೇ, ತಮಗೆ ಬೇರೆ ಸ್ಥಳದಲ್ಲಿ ಜಾಗ ಮಂಜೂರು ಮಾಡಿಕೊಡಬೇಕು. ತೆರವುಗೊಳಿಸಲು ಒಂದು ದಿನ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.