ಮೈಸೂರು: ಜಿಲ್ಲೆಯ ಕೊವಿಡ್ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಸರ ಕದ್ದ ಆರೋಪ ಬಂದಿದೆ. ಆಗಸ್ಟ್ 13 ರಂದು ನಡೆದಿರುವ ಘಟನೆ ನಡೆದಿದೆ. ಜಯಲಕ್ಷ್ಮಿ (56) ಅನಾರೋಗ್ಯದಿಂದ ಮೃತಪಟ್ಟಿದ್ದರು.
ನಗರದ ನಿವಾಸಿಯಾಗಿದ್ದ ಜಯಲಕ್ಷ್ಮಿಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.ಚಿಕಿತ್ಸೆಗಾಗಿ ಕುಟುಂಬಸ್ಥರು ಜಯಲಕ್ಷ್ಮಿರವರನ್ನ ಮೈಸೂರಿನ ಕೆಲವು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹೊದೆಡೆಯಲ್ಲಿ ಬೆಡ್ ಇಲ್ಲ ಎಂದು ಕಾರಣ ನೀಡಿ ದಾಖಲಿಸಿಕೊಳ್ಳದ ವಾಪಸ್ ಕಳಿಸಿದ್ದಾರೆ. ಕೊನೆಗೆ ಮೇಟಗಳ್ಳಿ ಕೊವಿಡ್ ಆಸ್ಪತ್ರೆಗೆ ಬಂದಾಗ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಕೆಲ ಸಮಯದಲ್ಲೇ ಜಯಲಕ್ಷ್ಮಿ ಮೃತಪಟ್ಟಿದ್ದಾರೆ.
ಕೊರೋನಾ ಟೆಸ್ಟ್ ನಂತರ ಮೃತದೇಹವನ್ನ ವಾಪಸ್ಸು ನೀಡಲಾಗಿದೆ. ಆದರೆ ಅಷ್ಟರಲ್ಲಿ
ಮಹಿಳೆಯ ಕುತ್ತಿಗೆಯಲ್ಲಿದ್ದ 26 ಗ್ರಾಂ ಚಿನ್ನದ ಸರ ನಾಪತ್ತೆಯಾಗಿದೆ. ಈ ಬಗ್ಗೆ ಕೊವಿಡ್ ಆಸ್ಪತ್ರೆ ಮುಖ್ಯಸ್ಥರಿಗೆ ಜಯಲಕ್ಷ್ಮಿ ಪುತ್ರ ರವೀಶ್ ದೂರು ನೀಡಿದ್ದಾರೆ. ಇದುವರೆಗೂ ರವೀಶ್ ಗೆ ಯಾವುದೇ ಪ್ರತಿಕ್ರಿಯಿ ಬಂದಿಲ್ಲ. ಇದೀಗ ರವೀಶ್ ಹಾಗೂ ಅವರ ಕುಟುಂಬದವರಿಗೆ ಕೊರೋನಾ ಪಾಸಿಟಿವ್ ಧೃಢವಾಗಿದೆ. ಕುಟುಂಬದ 5 ಸದಸ್ಯರಿಗೂ ಪಾಸಿಟಿವ್ ಹಿನ್ನೆಲೆ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದರಿಂದ ಪೊಲೀಸ್ ಠಾಣೆಗೆ ದೂರು ನೀಡಲು ಸಾಧ್ಯವಾಗಿಲ್ಲ. ಮೇಟಗಳ್ಳಿ ಪೊಲೀಸರ ಗಮನಕ್ಕೆ ಘಟನೆಯನ್ನ ತರಲಾಗಿದೆ.