ಶಿವಮೊಗ್ಗ: ಹವಾಮಾನ ವೈಪರೀತ್ಯದಿಂದಾಗಿ ಚಿತ್ರದುರ್ಗ ಎಂ.ಎಲ್.ಸಿ ಹೆಲಿಕ್ಯಾಪ್ಟರ್ ಎಮರ್ಜೆನ್ಸಿ ಲ್ಯಾಂಡ್ ಆಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಭದ್ರಾವತಿ ಸಮೀಪದ ಹಂಚಿನ ಸಿದ್ಧಾಪುರ ಗ್ರಾಮದ ಶಾಲೆಯ ಆವರಣದಲ್ಲಿ ಹೆಲಿಕ್ಯಾಪ್ಟರ್ ಇಳಿಸಲಾಗಿದೆ. ಬೆಂಗಳೂರಿನಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥಕ್ಕೆ ಆಗಮಿಸುತ್ತಿದ್ದ ಎಂ.ಎಲ್.ಸಿ ರಘು ಆಚಾರ್, ಅವರಿದ್ದ ಹೆಲಿಕ್ಯಾಪ್ಟರ್, ಶಿವಮೊಗ್ಗದಲ್ಲಿ ಮಳೆ ಹೆಚ್ಚಿರುವ ಕಾರಣದಿಂದಾಗಿ ಮಂಜು ಮುಸುಕು ವಾತಾವರಣವಿತ್ತು. ಈ ವೇಳೆ, ಪೈಲೆಟ್ ಮುನ್ನೆಚ್ಚರಿಕೆ ತೋರಿದ್ದು, ಹಂಚಿನ ಸಿದ್ದಾಪುರದ ರಸ್ತೆಯಲ್ಲಿ ವಾಹನ ಸಂಚರಿಸುತ್ತಿರದ ಕಾರಣ, ರಸ್ತೆ ಮೇಲೆಯೇ ಇಳಿಸಲು ಹೊರಟಿದ್ದರು. ಈ ವೇಳೆ ಸಮೀಪದಲ್ಲಿಯೇ, ಶಾಲಾ ಮೈದಾನ ಕಂಡಿದ್ದು, ಪೈಲೆಟ್ ನ ಸಮಯ ಪ್ರಜ್ಞೆಯಿಂದ ಮೈದಾನದಲ್ಲಿ ಹೆಲಿಕ್ಯಾಪ್ಟರ್ ಇಳಿಸಿ, ಉಂಟಾಗಬಹುದಾಗಿದ್ದ ಅನಾಹುತ ತಪ್ಪಿದೆ ಎಂದೇ ಹೇಳಬಹುದಾಗಿದೆ. ಈ ಸಮಯದಲ್ಲಿ ಗ್ರಾಮದ ಕೆಲವರು ಬಂದು ಹೆಲಿಕ್ಯಾಪ್ಟರ್ ಬಳಿ ಜಮಾಯಿಸಿದ್ದು, ಕೂತೂಹಲದಿಂದ ವೀಕ್ಷಿಸಿದ್ದಾರೆ. ಅಲ್ಲದೇ, ಹೆಲಿಕ್ಯಾಪ್ಟರ್ ಮತ್ತು ಶಾಸಕರೊಂದಿಗೆ ಸೆಲ್ಫಿ, ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ. ಅಲ್ಲದೇ ತಮ್ಮ ಗ್ರಾಮಕ್ಕೂ ಹೆಲಿಕ್ಯಾಪ್ಟರ್ ಬಂತಲ್ಲಾ ಅಂತಾ ಸಂತಸದಿಂದ ವೀಕ್ಷಿಸಿದ್ದಾರೆ. ಇನ್ನು ಹೆಲಿಕ್ಯಾಪ್ಟರ್ ನಲ್ಲಿ ಮುಳಬಾಗಿಲು ಮಾಜಿ ಶಾಸಕ ಮಂಜು ಸೇರಿದಂತೆ, ಪೈಲೆಟ್ ಮತ್ತು ಅಸಿಸ್ಟೆಂಟ್ ಇದ್ದು, ಹವಮಾನ ಪರಿಸ್ಥಿತಿ ತಿಳಿಗೊಂಡ ನಂತರ, ಈ ನಾಲ್ವರು ಶಿವಮೊಗ್ಗಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಬಂದಿಳಿದಿದ್ದಾರೆ. ಈ ಮೂಲಕ ಉಂಟಾಗಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದ್ದು, ಎಂ.ಎಲ್.ಸಿ. ರಘು ಆಚಾರ್ ನಿಟ್ಟುಸಿರು ಬಿಟ್ಟಿದ್ದಾರೆ.