ಹುಬ್ಬಳ್ಳಿ : ಹಳೆಹುಬ್ಬಳ್ಳಿ ಅಲ್ತಾಜ್ ಹೋಟೆಲ್ ಬಳಿ ಆಗಸ್ಟ್ 6ರಂದು ಧಾರವಾಡದ ಫ್ರೂಟ್ ಇರ್ಫಾನ್ ಮೇಲೆ ಗುಂಡಿನ ಮಳೆಗರೆದು ಹತ್ಯೆ ಮಾಡಿ ಪರಾರಿಯಾಗಿರುವವರಿಗೆ ನೆರವಾಗುವ ಮೂಲಕ ಕೃತ್ಯದಲ್ಲಿ ಭಾಗಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬುಲೆಟ್ ಬೈಕ್ ಚಲಾಯಿಸಿದ ಧಾರವಾಡದ ಅಫ್ತಾಬ್ ಬೇಪಾರಿ, ಡಿಯೋ ಚಲಾಯಿಸಿದ ತೌಸೀಫ್, ಕಾರು ಚಾಲನೆ ಮಾಡಿದ್ದ ಅಮೀರ ತಮಟಗಾರ, ಆರೋಪಿಗಳಿಗೆ ಹಣ ನೀಡಿದ್ದನೆನ್ನಲಾಗಿರುವ ಮೊಮಿನ್ ಹಾಗೂ ಇನ್ನೊಬ್ಬನನ್ನು ಬಂಧಿಸಲಾಗಿದೆ.
ಫ್ರೂಟ್ ಇರ್ಫಾನ್ ಮೇಲೆ ಗುಂಡು ಹಾರಿಸಿದವರು ಮುಂಬೈನಿಂದ ಬಂದಿದ್ದ ಬಾಡಿಗೆ ಹಂತಕರು ಎನ್ನಲಾಗಿದ್ದು, ಅವರು ಪರಾರಿಯಾಗಿದ್ದಾರೆ. ಹತ್ಯೆಗೈದು ಪರಾರಿಯಾಗಲು ನೆರವಾದ ಸ್ಥಳೀಯ ತಂಡಕ್ಕೆ ಮೊಮಿನ್ 3 ಲಕ್ಷ ರೂ. ಹಾಗೂ ಮುಂಬೈನಿಂದ ಬಂದಿದ್ದ ಹಂತಕರಿಗೆ 5 ಲಕ್ಷ ರೂ.ಗಳನ್ನು ನೀಡಿದ್ದನು ಎಂದು ಹೇಳಲಾಗಿದೆ. ಕೃತ್ಯಕ್ಕೆ ಬಳಕೆಯಾಗಿದ್ದ 3 ಬೈಕ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.